ಮಂಗಳೂರು: ಬಸ್‌ನಲ್ಲಿ ಅನ್ಯಕೋಮಿನ ಯುವಕ – ಯುವತಿಗೆ ಬೆದರಿಕೆ ಪ್ರಕರಣ : ಇಬ್ಬರು ವಶಕ್ಕೆ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಸ್‌ನಲ್ಲಿ ಅನ್ಯಕೋಮಿನ ಯುವಕ – ಯುವತಿಗೆ ಬೆದರಿಕೆ ಪ್ರಕರಣ : ಇಬ್ಬರು ವಶಕ್ಕೆ – Vishwanews24

ಮಂಗಳೂರು: ಮಂಗಳೂರು – ಉಡುಪಿ ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಅನ್ಯಕೋಮಿನ ಯುವಕ ಮತ್ತು ಯುವತಿ ಜತೆಯಾಗಿ ಪ್ರಯಾಣಿಸುತ್ತಿದ್ದುದನ್ನು ಸಾರ್ವಜನಿಕರು ಆಕ್ಷೇಪಿಸಿ ಗದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ 5-6 ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಘಟನೆ ಡಿ.10ರಂದು ನಡೆದಿದ್ದು, ಮಂಗಳೂರು ಹೊರವಲಯದ ಕಾಲೇಜೊಂದರ, ಉಡುಪಿಯ ನಿವಾಸಿ ವಿದ್ಯಾರ್ಥಿನಿ ಮತ್ತು ಶಿವಮೊಗ್ಗ ಮೂಲದ ಅನ್ಯಕೋಮಿನ ವಿದ್ಯಾರ್ಥಿ ಜತೆಯಾಗಿ ಉಡುಪಿ ಕಡೆಗೆ ಹೊರಟಿದ್ದು ಬಸ್ ನಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಆಕ್ಷೇಪಿಸಿ ಸಾರ್ವಜನಿಕರು ಗದರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಸಂಗಾತಿ ಅನುಮತಿಯಿಲ್ಲದೇ ಕಾಲ್​ ರೆಕಾರ್ಡ್ ಮಾಡುವುದು ಕಾನೂನುಬಾಹಿರ : ಹೈಕೋರ್ಟ್ ಮಹತ್ವದ ಆದೇಶ – VIshwanews24