ಮಂಗಳೂರು : ಬಾತ್‌ರೂಮ್‌ನಲ್ಲಿ ಬಾಲಕಿಯ ವೀಡಿಯೊ ಚಿತ್ರೀಕರಣ : ಅಪರಾಧಿಗೆ ಜೈಲು ಶಿಕ್ಷೆ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು:ಬಾತ್‌ರೂಮ್‌ನಲ್ಲಿ ಬಾಲಕಿಯ ವೀಡಿಯೊ ಚಿತ್ರೀಕರಣ : ಅಪರಾಧಿಗೆ ಜೈಲು ಶಿಕ್ಷೆ

ಮಂಗಳೂರು: ಶೌಚಗೃಹದಲ್ಲಿ ಸ್ನಾನ ಮಾಡುತ್ತಿದ್ದ ಅಪ್ರಾಪ್ತಯ ವೀಡಿಯೊ ಚಿತ್ರೀಕರಣ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೊಕ್ರೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ಕಾಮುಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2024ರ ಮಾ.10ರಂದು ಬಜೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ರಾತ್ರಿ 8:45ರ ಸುಮಾರಿಗೆ ಬಾಲಕಿ ತನ್ನ ಮನೆಯ ಶೌಚಗೃಹದಲ್ಲಿ ಸ್ನಾನ ಮಾಡುತ್ತಿದ್ದಳು. ಈ ವೇಳೆ ಆರೋಪಿ ಗಗನ್ (24) ಮೊಬೈಲ್‌ನಲ್ಲಿ ವೀಡಿಯೊ ಚಿತ್ರೀಕರಣ ಮಾಡಿದ್ದ. ಮೊಬೈಲ್ ಲೈಟ್ ಕಂಡು ಬಾಲಕಿ ಬೊಬ್ಬೆ ಹೊಡೆದಾಗ ಆಕೆಯ ತಾಯಿ ಬಂದಿದ್ದರು. ಈ ವೇಳೆ ಆರೋಪಿ ಓಡಿ ತಪ್ಪಿಸಿಕೊಂಡಿದ್ದಾನೆ.

ಮಂಗಳೂರು:  ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ – vishwanews24

ಈ ಬಗ್ಗೆ ಬಜೈ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಸೆಗಳಾದ ಗುರಪ್ಪ ಕಾಂತಿ ಮತ್ತು ರೇವಣ್ಣ ಸಿದ್ದಪ್ಪ ಜಿ. ತನಿಖೆ ನಡೆಸಿದ್ದರು. ಎಸ್ಸೆ ಸತೀಶ್ ಕೆ.ಎಸ್. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪಕರಣ ನಡೆದು ಕೇವಲ 9 ತಿಂಗಳಿನಲ್ಲೇ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸ್) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶ ವಿನಯ್ ದೇವರಾಜ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 354 (ಸಿ) ಅಡಿಯಲ್ಲಿ ಆರೋಪಿಗೆ 1ವರ್ಷ ಸಾದಾ ಸಜೆ, 20,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಶಿಕ್ಷೆ ಅನುಭವಿಸಲು ಸೂಚಿಸಿದೆ. ದಂಡದ ಮೊತ್ತದಲ್ಲಿ 10,000 ರೂ.ವಲ್ಲದೆ ಪ್ರತ್ಯೇಕವಾಗಿ 1ಲ.ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಮಂಗಳೂರು : ಜಿಲ್ಲಾ ಕಾರಾಗೃಹದ ಆವರಣಕ್ಕೆ ಮೊಬೈಲ್, ಸಿಗರೇಟ್ ಎಸೆಯಲು ಯತ್ನ ; ಯುವಕನ ಬಂಧನ – vishwanews24

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.

Leave a Reply