ಮಂಗಳೂರು: ಬಿಪಿನ್ ರಾವತ್ ಸಾವು – ವಿವಾದಾತ್ಮಕ ಪೋಸ್ಟ್ ,  ಕಾಮೆಂಟ್ ಹಾಕುವ ಮೂಲಕ ಸಂಭ್ರಮಿಸಿರುವವರ ವಿರುದ್ದ ತನಿಖೆ : ಶಶಿಕುಮಾರ್  – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಬಿಪಿನ್ ರಾವತ್ ಸಾವು – ವಿವಾದಾತ್ಮಕ ಪೋಸ್ಟ್ ,  ಕಾಮೆಂಟ್ ಹಾಕುವ ಮೂಲಕ ಸಂಭ್ರಮಿಸಿರುವವವಿರುದ್ದ ತನಿಖೆ : ಶಶಿಕುಮಾರ್  – Vishwanews24

ಮಂಗಳೂರು: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನ್ನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಹಾಕುವ ಮೂಲಕ ಸಂಭ್ರಮಿಸಿರುವ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಬಗ್ಗೆ ಪ್ರತಿಕ್ರಿಯಿಸಿದವರ ವಿರುದ್ದ ತನಿಖೆ ನಡೆಸಲಾಗುತ್ತಿದ್ದು, ಅವರ ಬಂಧನವಾಗಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಈ ರೀತಿಯ ಕಾಮೆಂಟ್‌‌ಗಳನ್ನು ಮೂರು ಖಾತೆಗಳಲ್ಲಿ ಹಾಕಿರುವುದು ತಿಳಿದು ಬಂದಿದ್ದು, ಇದು ನಕಲಿ ಖಾತೆಯ ಹಾಗೂ ಯಾಕೆ ಈ ರೀತಿಯ ಕಾಮೆಂಟ್‌‌ಗಳನ್ನು ಹಾಕುತ್ತಿದ್ದಾರೆ ಎಂಬುದನ್ನು ನಾವು ತನಿಖೆ ಮಾಡುತ್ತೇವೆ” ಎಂದರು.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 505(1ಎ), 505(2) ಮತ್ತು 505(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ : ಮತಾಂತರ ಯತ್ನ –  ಪತ್ನಿ ಮಕ್ಕಳ ಕತ್ತು ಹಿಸುಕಿ ಕೊಲೆ – Vishwanews24