ಮಂಗಳೂರು : ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ ; ಅದೃಷ್ಟವಶಾತ್‌ ಪ್ರಯಾಣಿಕರು ಪಾರು – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ ; ಅದೃಷ್ಟವಶಾತ್‌ ಪ್ರಯಾಣಿಕರು ಪಾರು

ಮಂಗಳೂರು: ಮಂಗಳೂರಿನ ಕೊಟ್ಟಾರದಿಂದ ನಂತೂರಿನ ಕಡೆಗೆ ಬರುತ್ತಿದ್ದ ಮದುವೆ ದಿಬ್ಬಣದ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಂಗಳೂರಿನ ನಂತೂರಿನಲ್ಲಿ ನಡೆದಿದೆ.

ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಕಾರು ಚಾಲಕ ಪಾರಾಗಿದ್ದಾರೆ. ಓವರ್ ಟೇಕ್ ಭರಾಟೆಯಲ್ಲಿ ಈ ದುರಂತ ನಡೆದಿದೆ ಎಂದು ಗೊತ್ತಾಗಿದೆ.

ಮಂಗಳೂರಿನ ನಂತೂರು ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಮದುವೆ ದಿಬ್ಬಣದ ಈ ಬಸ್ಸಿನಲ್ಲಿ ಬಹಳಷ್ಟು ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್‌ ಯಾರಿಗೂ ಅಪಾಯ ಉಂಟಾಗಿಲ್ಲ.

BREAKING NEWS – ಕೇಂದ್ರದ ಸುತ್ತೋಲೆ ಪ್ರಕಾರ ಸುರತ್ಕಲ್ ಟೋಲ್ ಸಂಗ್ರಹ ಹೆಜಮಾಡಿಯಲ್ಲಿ ಸಂಗ್ರಹ ಮಾಡುವುದು ಫಿಕ್ಸ್- ಆದರೆ ಸಂಗ್ರಹ ದಿನ ನಿಗದಿಯಾಗಿಲ್ಲ : ಉಡುಪಿ ಜಿಲ್ಲಾಧಿಕಾರಿ : vishwanews24

ಕಾರು ಚಾಲಕ ಕೂಡಾ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದ್ದರಿಂದ ಹೆದ್ದಾರಿಯುದ್ದಕ್ಕೂ ಕೆಲ ಕಾಲ ಸಂಚಾರ ಅಸ್ತವ್ಯಸ್ಥ ಉಂಟಾಗಿತ್ತು.

ಬಳಿಕ ಸಂಚಾರಿ ಪೊಲೀಸರು ಆಗಮಿಸಿ ವಾಹನವನ್ನು ತೆರವುಗೊಳಿಸಿದರು.

ಸುರತ್ಕಲ್: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ , ನಾಲ್ವರ ರಕ್ಷಣೆ – Vishwanews24

 

Leave a Reply