ಮಂಗಳೂರು : ಮಳಲಿ ಮಸೀದಿ ಪ್ರಕರಣ: ಫೆ.17ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ – Vishwanews24

Featured, ದಕ್ಷಿಣ ಕನ್ನಡ

ಮಳಲಿ ಮಸೀದಿ ಪ್ರಕರಣ: ಫೆ.17ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

ಮಂಗಳೂರು : ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಮಂಗಳೂರು ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಫೆ.17ಕ್ಕೆ ಮುಂದೂಡಿದೆ.

ಮಳಲಿ ಮಸೀದಿಯ ಸರ್ವೇ ನಡೆಸಲು ಅವಕಾಶದ ಕುರಿತು ಸಂಘ ಪರಿವಾರದ ಪರ ವಕೀಲರು ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಎದುರು ಕಕ್ಷಿಯ ವಾದಕ್ಕೆ ಪ್ರತಿವಾದ ಮಂಡಿಸಲು ನಿರಾಕರಿದ ಮಸೀದಿ ಪರ ವಕೀಲರು, ಈಗಾಗಲೇ ಮಸೀದಿ ವಕ್ಫ್ ಆಸ್ತಿ ಎಂಬ ಕುರಿತಾದ ವ್ಯಾಜ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿದೆ. ಈ ಕುರಿತು ಯಾವುದೇ ಆದೇಶವನ್ನು ಉಚ್ಚ ನ್ಯಾಯಾಲಯ ನೀಡಿಲ್ಲ. ಹೈಕೋರ್ಟ್ ಆದೇಶ ಬಂದ ಬಳಿಕವಷ್ಟೇ ಮಸೀದಿಯ ಸರ್ವೇಗೆ ಅವಕಾಶದ ಕುರಿತಾದ ವಾದ ಮಂಡಿಸಲು ಸಾಧ್ಯ.

ಜನಸ್ಪಂದನದಲ್ಲಿ ಸ್ವೀಕರಿಸಲಾದ ಅರ್ಜಿಗಳಿಗೆ ಮೂರು ತಿಂಗಳೊಳಗೆ ಪರಿಹಾರ ಒದಗಿಸಬೇಕು  : ಅಧಿಕಾರಿಗಳಿಗೆ  ಸಿದ್ದರಾಮಯ್ಯ ಸ್ಪಷ್ಟ ಸೂಚನೆ – Vishwanews24

ಹಾಗಾಗಿ ಹೈಕೋರ್ಟ್ ಆದೇಶ ಬರುವವರೆಗೆ ಸರ್ವೇಗೆ ಸಂಬಂಧಿಸಿದ ವಾದ ವಿವಾದವನ್ನು ಮುಂದೂಡಬೇಕೆಂದು ವಾದಿಸಿದರು.

ಈ ಹಿನ್ನೆಲೆಯಲ್ಲಿ ಮಸೀದಿ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ಮಂಗಳೂರು ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿ ಆದೇಶಿಸಿದೆ

Leave a Reply