ಮಂಗಳೂರು ಮಳೆಗೆ ಕೊಟ್ಟಾರ ಚೌಕಿ ರಸ್ತೆಯಲ್ಲಿ ಕೃತಕ ನೆರೆ -Vishwanews24
ಮಂಗಳೂರು, : ಸೋಮವಾರ ಮಧ್ಯಾಹ್ನದ ಬಳಿಕ ಮಳೆಗೆ ನಗರದ ಹಲವು ಕಡೆ ರಸ್ತೆಯಲ್ಲೇ ನೀರು ಹರಿದಿದೆ, ಅಂಗಡಿ ಮುಂಗಟ್ಟಿಗೆ ನೀರು ನುಗ್ಗಿವೆ.
ಭಾರೀ ಮಳೆಗೆ ನಗರದ ಕೊಟ್ಟಾರಚೌಕಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.
ಕೊಟ್ಟಾರ ಚೌಕಿಯಲ್ಲಿ ರಸ್ತೆಯು ಸಂಪೂರ್ಣವಾಗಿ ನೀರಿನಿಂದ ಆವೃತ್ತವಾಗಿದ್ದು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ಅಲ್ಲದೆ ಈ ಭಾಗದ
ರಾಜಕಾಲುವೆಗಳ ಹೂಳೆತ್ತದ ಕಾರಣ ಎರಡೂ ಬದಿಯ ಕೆಲವು ಅಂಗಡಿಗಳಿಗೆ ನೀರು ನುಗ್ಗಿವೆ ಎಂದು ತಿಳಿದು ಬಂದಿದೆ.
ಈ ಮಧ್ಯೆ ನಗರದ ಸುಲ್ತಾನ ಬತ್ತೇರಿಯಲ್ಲೂ ನೀರು ಕೆಲವು ಮನೆಗಳ ಅಂಗಳ ದಾಟಿವೆ.
