ಮಂಗಳೂರು : ಮೃತಪಟ್ಟಿದ್ದಾನೆ ಎಂದು ತಿಳಿದು ಆಯಂಬುಲೆನ್ಸ್​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣುಬಿಟ್ಟು ಉಸಿರಾಡಿದ ..! Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಮೃತಪಟ್ಟಿದ್ದಾನೆ ಎಂದು ತಿಳಿದು ಆಯಂಬುಲೆನ್ಸ್​​ನಲ್ಲಿ ಒಯ್ಯುವಾಗ ಆತ ಕಣ್ಣುಬಿಟ್ಟು ಉಸಿರಾಡಿದ ..!

ಮಂಗಳೂರು : ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಆಯಂಬುಲೆನ್ಸ್​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣು ಬಿಟ್ಟು ಉಸಿರಾಡಿದ ಘಟನೆ ನಡೆದಿದೆ.

ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿಯು ಆಕ್ಸಿಜನ್ ಸಹಾಯದಿಂದ ಉಸಿರಾಟ ನಡೆಯುತ್ತಿರುವುದರಿಂದ ಆಕ್ಸಿಜನ್ ತೆಗೆದರೆ ಅವರು ಸಾವನ್ನಪ್ಪುತ್ತಾರೆ ಎಂದು ಸಂಬಂಧಿಕರಿಗೆ ‌ತಿಳಿಸಲಾಗಿತ್ತು.

ಸಿದ್ಧಗಂಗಾ ಮಠ ದಾಸೋಹ ದಿನಕ್ಕೆ ಸಿಎಂ ಬೊಮ್ಮಾಯಿ ಚಾಲನೆ – Vishwanews24

ಅವರು ಬದುಕುವ ಸಾಧ್ಯತೆ ಇಲ್ಲದಿರುವುದರಿಂದ ಆಕ್ಸಿಜನ್ ತೆರವು ಮಾಡಲು ಸಂಬಂಧಿಕರು ತಿಳಿಸಿದಂತೆ ಆಕ್ಸಿಜನ್ ತೆರವು ಮಾಡಲಾಗಿತ್ತು. ಆಕ್ಸಿಜನ್ ತೆಗೆದ ಬಳಿಕ ಮೃತಪಟ್ಟಿದ್ದಾರೆ ಎಂದು ಅವರನ್ನು ಆಯಂಬುಲೆನ್ಸ್​ನಲ್ಲಿ ಮನೆಗೆ ಕೊಂಡೊಯ್ಯಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಚಿತೆ ಸಿದ್ಧ ಮಾಡಲು ಕೂಡ ಸೂಚಿಸಲಾಗಿತ್ತು.

ಆದರೆ, ಆಯಂಬುಲೆನ್ಸ್​ನಲ್ಲಿ ಹೋಗುತ್ತಿರುವಾಗ ಕಾಸರಗೋಡು ಜಿಲ್ಲೆಯ ಉಪ್ಪಳ ಎಂಬಲ್ಲಿ ಗುರುವ ಅವರ ದೇಹದಲ್ಲಿ ಚಲನೆ ಕಂಡು ಬಂದಿದೆ. ಕಣ್ಣುಬಿಟ್ಟ ಅವರು ಉಸಿರಾಟ ಆರಂಭಿಸಿದ್ದರು. ಕೂಡಲೇ ಅವರನ್ನು ಬದಿಯಡ್ಕದ ಕ್ಲಿನಿಕ್​​ಗೆ ಕರೆದೊಯ್ದಾಗ ಆತ ಜೀವಂತವಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಬಳಿಕ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಕಳ : ಮುಖ್ಯಮಂತ್ರಿಯಾಗಿದ್ದಾಗ ಗಣರಾಜ್ಯೋತ್ಸವ ಪರೇಡ್‌ಗೆ ಟಿಪ್ಪು ಸುಲ್ತಾನ್ ಸ್ಥಬ್ದಚಿತ್ರ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದ ಸಿದ್ದರಾಮಯ್ಯನವರು ಈಗ ಮಹರ್ಷಿ ನಾರಾಯಣಗುರುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ : ಸುನೀಲ್ ಕುಮಾರ್ – Vishwanews24

Leave a Reply