ಮಂಗಳೂರು : ರಾಜ್ಯದಲ್ಲಿ ಯಾವುದೇ ಧರ್ಮ ಯುದ್ಧ ನಡೆಯುತ್ತಿಲ್ಲ , ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ : ಸಿಎಂ- VIshwanews24
ರಾಜ್ಯದಲ್ಲಿ ಯಾವುದೇ ಧರ್ಮ ಯುದ್ಧ ನಡೆಯುತ್ತಿಲ್ಲ..
ಸಂಘಟನೆಗಳು ಪ್ರಚೋದನಕಾರಿ ಮಾತನಾಡುವುದು ವಿಚಾರ ಅಲ್ಲ..
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ..
ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ..
ಮಂಗಳೂರು: ರಾಜ್ಯದಲ್ಲಿ ಯಾವುದೇ ಧರ್ಮ ಯುದ್ಧ ನಡೆಯುತ್ತಿಲ್ಲ. ಸಂಘಟನೆಗಳು ಪ್ರಚೋದನಕಾರಿ ಮಾತನಾಡುವುದು ವಿಚಾರ ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಕೆಲವರು ಹಿನ್ನೆಲೆಯಿಂದ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಇವತ್ತು ಮಂಗಳೂರಿನಲ್ಲಿ ಬಿಜೆಪಿ ವಿಭಾಗೀಯ ಸರಣಿ ಸಭೆಗಳಿವೆ. ಜಿಲ್ಲಾವಾರು ಸಭೆಗಳು ಮತ್ತು ನಾಯಕರ ಸಭೆಗಳಿವೆ. ಚುನಾವಣಾ ತಯಾರಿ ಹಿನ್ನೆಲೆ ವಿಭಾಗ ಮಟ್ಟದ ಸಭೆಗಳನ್ನು ಮಾಡುತ್ತಿದ್ದೇವೆ. ಎ.16 ಮತ್ತು 17 ರಾಜ್ಯ ಕಾರ್ಯಾಕಾರಿಣಿ ಸಭೆ ಮಾಡಿ ಪಕ್ಷದ ಚರ್ಚೆ ಮಾಡುತ್ತೇವೆ ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಯಾವುದೇ ರೀತಿಯಲ್ಲಿ ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ. ಡಿಜಿಪಿ ನಿನ್ನೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತು ಕಾನೂನು ರಕ್ಷಣೆ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ನಾವು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಮುಸ್ಲಿಮರಿಗೆ ತಾಕತ್ತಿದ್ದರೆ ನಿಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಹಿಜಾಬ್ ಹಾಕಿಸಿ : RSS ಮುಖಂಡ – Vishwanews24
