ಮಂಗಳೂರು: ವಿದ್ಯಾರ್ಥಿಗಳ ಅಶ್ಲೀಲ ವರ್ತನೆ ; ಡ್ರಗ್ಸ್‌, ಸೆಕ್ಸ್‌ ಮಾಫಿಯಾ ಶಂಕೆ: ಉನ್ನತ ಮಟ್ಟದ ತನಿಖೆಗೆ ಆಗ್ರಹ – VIshwanews24

Featured, ದಕ್ಷಿಣ ಕನ್ನಡ

ಮಂಗಳೂರು: ವಿದ್ಯಾರ್ಥಿಗಳ ಅಶ್ಲೀಲ ವರ್ತನೆ ; ಡ್ರಗ್ಸ್‌, ಸೆಕ್ಸ್‌ ಮಾಫಿಯಾ ಶಂಕೆ: ಉನ್ನತ ಮಟ್ಟದ ತನಿಖೆಗೆ ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಆಗ್ರಹ

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ ವರ್ತನೆಯ ವಿಡಿಯೋ ವೈರಲ್ ಕೃತ್ಯದ ಹಿಂದೆ ಡ್ರಗ್ಸ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಅಡಗಿರುವ ಬಗ್ಗೆ ಸಂಶಯವಿದ್ದು, ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕೆಂದು ಬಜರಂಗದಳ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಒಟ್ಟು ಹನ್ನೊಂದು ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಶ್ಲೀಲ ವರ್ತನೆ ತೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ. ಇದೇ ಕಾಲೇಜಿನ ವಿದ್ಯಾರ್ಥಿನಿಯರು ಕೆಲ ತಿಂಗಳ ಹಿಂದೆ ಬೀದಿ ಹೊಡೆದಾಟ ಮಾಡಿದ್ದು, ಮಾದಕ ವಸ್ತು ಸೇವನೆ ಮಾಡಿ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ನಡೆದಿದೆ. ದೇಶ-ವಿದೇಶದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಮಂಗಳೂರಿಗೆ ಎಜುಕೇಶನ್ ಹಬ್ ಎಂಬ ಹೆಸರಿದ್ದು,ವಿದ್ಯಾರ್ಥಿಗಳ ಈ ಅನುಚಿತ ವರ್ತನೆಗೆ ಮಂಗಳೂರಿನ ಹೆಸರಿಗೆ ಕಳಂಕ ತರುತ್ತಿದೆ ಎಂದರು.

ಈ ಕೃತ್ಯದ ಹಿಂದೆ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಅಡಗಿರುವ ಬಗ್ಗೆ ಸಂಶಯವಿದ್ದು ಕೂಡಲೇ ಕಾಲೇಜುಗಳ ಆಡಳಿತ ಮಂಡಳಿ, ಕಾಲೇಜಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.

Leave a Reply