ಮಂಗಳೂರು ವಿಮಾನ ನಿಲ್ದಾಣ : ಟ್ರಾಲಿ ಬ್ಯಾಗ್‌ನಲ್ಲಿ  16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ  -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು ವಿಮಾನ ನಿಲ್ದಾಣ : ಟ್ರಾಲಿ ಬ್ಯಾಗ್‌ನಲ್ಲಿ  16.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ವಶ, ಓರ್ವನ ಬಂಧನ  -Vishwanews24

ಮಂಗಳೂರು: ಮಾರ್ಚ್ 2 ರ ಮಂಗಳವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಟ್ರಾಲಿ ಬ್ಯಾಗ್ ‌ಗಳಲ್ಲಿ ಮುಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಇತರರಿಗೆ ಮಾದರಿಯಾಗುವ ಬದುಕು ನಮ್ಮದಾಗಬೇಕು : ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ -Vishwanews24

ಪ್ರಕರಣಕ್ಕೆ ಸಂಬಂಧ ಮುರುಡೇಶ್ವರ ಮೂಲದ ಮೊಹಮ್ಮದ್ ಅವಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ.

ಸಂಸದ ಪ್ರತಾಪ್ ಸಿಂಹ ವಿರುದ್ದ ಶಿಲುಬೆಗಳನ್ನು ಹಿಡಿದು ಧರಣಿ ಸತ್ಯಾಗ್ರಹ ನಡೆಸಿದ ಕ್ರಿಶ್ಚಿಯನ್ ಪೊಲಿಟಿಕಲ್ ಲೀಡರ್ಸ್ ಫೋರಂನ ಕಾರ್ಯಕರ್ತರು -Vishwanews24

ವಶಪಡಿಸಿಕೊಳ್ಳಲಾದ ಚಿನ್ನದ ಮೌಲ್ಯ 16,52,000 ರೂ. ಎಂದು ಹೇಳಲಾಗಿದೆ. ಉಪ ಆಯುಕ್ತ ಡಾ.ಕಪಿಲ್ ಗಡೆ ಐಆರ್ಎಸ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಅಧಿಕಾರಿಗಳಾದ ನಾಗೇಶ್ ಕುಮಾರ್, ಅಧೀಕ್ಷಕರು, ಸುಬೇಂದು ಬೆಹ್ರಾ ಮತ್ತು ನವೀನ್ ತಂಡದಲ್ಲಿದ್ದರು.