ಮಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕೊರೋನ ಜಾಗೃತಿ ಮೂಡಿಸಲು ಕಾಂಗ್ರೆಸ್ ನಿಂದ ‘ಬ್ರೇಕ್ ದಿ ಚೈನ್’ ಅಭಿಯಾನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದ. ಕ. ಜಿಲ್ಲಾ ಕಾಂಗ್ರೆಸ್ ಕೊರೊನಾ ಸಹಾಯವಾಣಿ ‘ಬ್ರೇಕ್ ದಿ ಚೈನ್’ ಜಾಗೃತಿ ಅಭಿಯಾನ -Vishwanews24

ರಾಜ್ಯದಲ್ಲಿ ಜನರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿಧಿಸುವ ಮೂಲಕ ರಾಜ್ಯ ಸರ್ಕಾರ ಪರೋಕ್ಷವಾಗಿ ಲಾಕ್ ಡೌನ್ ವಿಧಿಸಿದೆ : ಐವನ್‌ ಡಿಸೋಜಾ  

ಮಂಗಳೂರು: ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೊರೊನಾ ಸಹಾಯವಾಣಿ ‘ಬ್ರೇಕ್ ದಿ ಚೈನ್’ ಎಂಬ ಜಾಗೃತಿ ಅಭಿಯಾನವನ್ನು ಏಪ್ರಿಲ್ 21 ರ ಬುಧವಾರ ಪ್ರಾರಂಭಿಸಿದೆ.

ಬಳಿಕ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಐವನ್‌ ಡಿಸೋಜಾ, “ತಜ್ಞರ ಪ್ರಕಾರ ಸಾಂಕ್ರಾಮಿಕ ರೋಗವು ಒಂದೂವರೆ ವರ್ಷಗಳ ಕಾಲ ಇರುತ್ತದೆ. ಭಾರತವೂ ಮೂರನೇ ಕೊರೊನಾ ಹರಡುವಿಕೆಯತ್ತ ಸಾಗುತ್ತಿದೆ. ಆದ್ದರಿಂದ ಸೋಂಕು ಹರಡುವುದನ್ನು ನಿಲ್ಲಿಸುವುದು ಬಹಳ ಮುಖ್ಯ. ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ‘ಬ್ರೇಕ್ ದಿ ಚೈನ್’ ಅಭಿಯಾನವನ್ನು ಪ್ರಾರಂಭಿಸಿದೆ” ಎಂದು ತಿಳಿಸಿದ್ದಾರೆ.

”ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗವು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತಿಮ ಸಂಸ್ಕಾರವನ್ನು ಬೋಳೂರು ಹಾಗೂ ನಂದಿಗುಡ್ಡೆ ಸ್ಮಶಾನದಲ್ಲಿ ಉಚಿತವಾಗಿ ನಡೆಸಲು ಅನುಮತಿ ನೀಡುವಂತೆ ಒತ್ತಾಯ ಮಾಡಿದೆ. ಪ್ರಸ್ತುತ 7000 ರಿಂದ 8000 ರೂ. ವಿಧಿಸಲಾಗುತ್ತದೆ. ಆದ್ದರಿಂದ ಅಂತಿಮ ಸಂಸ್ಕಾರದ ವೆಚ್ಚವನ್ನು ಜಿಲ್ಲಾಡಳಿತ ಅಥವಾ ನಗರ ಪಾಲಿಕೆ ಭರಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ” ಎಂದು ಐವಾನ್‌ ಡಿಸೋಜಾ ಅವರು ಹೇಳಿದರು.

ರಾಜ್ಯದಲ್ಲಿ ವೀಕೆಂಡ್​​ ಲಾಕ್​ಡೌನ್ – ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ -Vishwanews24

”ಕೊರೊನಾ ಸೋಂಕಿತರ ಮೃತ ದೇಹ ದಹನ ಪ್ರಕ್ರಿಯೆಯನ್ನು ಪರಿಶೀಲಿಸಲು ನೇಮಕಗೊಂಡ ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಪ್ರಕಟಿಸಬೇಕು” ಎಂದು ಆಗ್ರಹಿಸಿದ ಐವನ್‌ ಅವರು, ”ಕೊರೊನಾದಿಂದ ಸಾವನ್ನಪ್ಪುವ ಜನರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಪ್ರತ್ಯೇಕ ಭೂಮಿಯನ್ನು ಗುರುತಿಸಬೇಕು ಎಂದರು.

ಜಿಲ್ಲೆಯ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಹಣದ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ ಎಂದೂ ಅವರು ತಿಳಿಸಿದರು.

ಇನ್ನು ಜಿಲ್ಲೆಯಲ್ಲಿ ಲಸಿಕೆ ಕೊರತೆಯ ವಿಚಾರದಲ್ಲಿ ಜಿಲ್ಲಾಡಳಿತದ ವಿರುದ್ದ ಹರಿಹಾಯ್ದ ಐವಾನ್‌, ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ. ನಮ್ಮ ಜಿಲ್ಲೆಗೆ ಒಬ್ಬ ಮಂತ್ರಿ ಇದ್ದಾರೆ. ಆದರೆ ಅವರು ಎಲ್ಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಬಿಜೆಪಿ ಶಾಸಕರು ಗುದ್ದಲಿ ಕಲ್ಲುಗಳನ್ನು ಹಾಕುವಲ್ಲಿ ನಿರತರಾಗಿದ್ದಾರೆ. ಇದು ನಿಮ್ಮ ಕರ್ತವ್ಯವೇ ಎಂದು ಪ್ರಶ್ನಿಸಿದರು.

“ರಾಜ್ಯದಲ್ಲಿ ಜನರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿಧಿಸುವ ಮೂಲಕ ರಾಜ್ಯ ಸರ್ಕಾರ ಪರೋಕ್ಷವಾಗಿ ಲಾಕ್ ಡೌನ್ ವಿಧಿಸಿದೆ” ಎಂದು ಕೂಡಾ ಅಭಿಪ್ರಾಯಪಟ್ಟರು.