ಮಂಗಳೂರು : ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ ಖಾಲಿ ಚೆಕ್‌ನ ಮೂಲಕ ಹಣ ಪಡೆದು ಮಹಿಳೆಗೆ 2.45 ಲಕ್ಷ ರೂ. ವಂಚನೆ – Vishwanews24
ಮಂಗಳೂರು : ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ ಖಾಲಿ ಚೆಕ್‌ನ ಮೂಲಕ ಹಣ ಪಡೆದು ಮಹಿಳೆಗೆ 2.45 ಲಕ್ಷ ರೂ. ವಂಚನೆ
ಮಂಗಳೂರು: ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ ಖಾಲಿ ಚೆಕ್‌ನ ಮೂಲಕ ಹಣ ಪಡೆದು ಮಹಿಳೆಯೊಬ್ಬರಿಗೆ 2.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಲ್ಪಾ ಪೂಂಜಾ ಎಂಬ ಮಹಿಳೆ ಜೆಪ್ಪು ಶಾಂತಿನಗರದ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆಯುವ ಸಂದರ್ಭ ಅವರ ಖಾತೆ ಇರುವ ಐಡಿಬಿಐ ಬ್ಯಾಂಕ್‌ನ ಖಾಲಿ ಚೆಕ್‌ಗಳನ್ನು ನೀಡಿದ್ದು, ಸೊಸೈಟಿಯ ವ್ಯವಸ್ಥಾಪಕ ಮತ್ತು ಇತರ ಮೂವರು ಸೇರಿಕೊಂಡು ಆ ಚೆಕ್‌ಗಳ ಮೂಲಕ ಹಣವನ್ನು ಡ್ರಾ ಮಾಡಿದ್ದಾರೆ.
ಹರ್ಷ ಹತ್ಯೆ ಪ್ರಕರಣ : ಹತ್ತನೇ ಆರೋಪಿ ಜಾಫರ್ ಸಾದಿಕ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು – Vishwanews24
ಇನ್ನು ಆರೋಪಿಗಳಾದ ಪ್ರಜ್ವಲ್ ಜೋಯೆಲ್ ಫೆರ್ನಾಂಡಿಸ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 50,000 ರೂ., ರತನ್ ಕುಮಾರ್ ಕೆ. ಹೆಸರಿನಲ್ಲಿ ಒಂದು ಚೆಕ್ ಮೂಲಕ 99,000 ರೂ., ಅಶ್ರಫ್ ಅಬ್ದುಲ್ ಖಾದರ್ ಹೆಸರಿನಲ್ಲಿ ಒಂದು ಚೆಕ್ ಮೂಲಕ 96,500 ರೂ. ವಿತ್ ಡ್ರಾ ಮಾಡಿ ವಂಚಿಸಲಾಗಿದೆ ಎಂದು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

