ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನಾ ಧರಣಿ ಆರಂಭ : ಪೊಲೀಸ್ ಬಿಗಿ ಭದ್ರತೆ – Vishwanews24
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನಾ ಧರಣಿ ಆರಂಭ : ಪೊಲೀಸ್ ಬಿಗಿ ಭದ್ರತೆ
ಮಂಗಳೂರು : ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕರು ಇಂದು ಬೆಳಗ್ಗೆ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಟೋಲ್ ಗೇಟ್ ಎದುರು ಜಮಾಯಿಸಿರುವ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ, ಸಂಸದ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ಅನ್ನು ಅಕ್ಟೋಬರ್ 18 ರೊಳಗೆ ರದ್ದುಪಡಿಸುವಂತೆ ಸೆ.13 ರಂದು ಸರ್ಕಾರಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಗಡುವು ನೀಡಿತ್ತು, ಸರ್ಕಾರ ತಮ್ಮ ಮನವಿಗೆ ಮಣಿಯದಿದ್ದರೆ ಅಕ್ಟೋಬರ್ 18 ರಂದು ಟೋಲ್ ಗೇಟ್‌ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ.
ಉಡುಪಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..ಯಶ್‌ಪಾಲ್ ಸುವರ್ಣ ಅಂಗರಕ್ಷಕನಿಗೆ ಗಾಯ – Vishwanews24
ಈ ವೇಳೆ ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಮಾತನಾಡಿ, ಟೋಲ್ ತೆಗೆಯುವುದ್ದನ್ನು ರದ್ದು ಮಾಡುವವರೆಗೆ ನಾವು ಹೋರಾಟ ನಿಲ್ಲಿಸುವುದಿಲ್ಲ. ಇಂದು ಟೋಲ್ ಪಡೆಯುವುದು ರದ್ದಾಗಲೇಬೇಕು. ಟೋಲ್ ಅಧಿಕೃತ ರದ್ದಿನ ಬಗ್ಗೆ ದಿನಾಂಕ ಘೋಷಿಸಬೇಕು ಎಂದಿದ್ದಾರೆ.
ಇನ್ನು ಪ್ರತಿಭಟನ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ ಕೂಡ ಭೇಟಿ ನೀಡಿದ್ದು, ಅನೇಕ ಸಂಖ್ಯೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ವಾಪಸ್ಸು ನನ್ನ ತಾಯಿ ನೆಲಕ್ಕೆ ಕರೆದುಕೊಂಡು ಹೋದ ಕಾಂತಾರ..ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ ಮೆಚ್ಚುಗೆ – Vishwanews24
