ಮಂಗಳೂರು: ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಮಂಗಳೂರು: ಕಾಂತಾರ ಚಾಪ್ಟರ್ 1 ಯಶಸ್ವಿ ಬೆನ್ನಲ್ಲೇ ಮಂಗಳೂರಿನ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಕೇಳಿಬಂದಿದೆ.

ನಟ ರಿಷಬ್ ಶೆಟ್ಟಿ  ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ನಡೆದಿತ್ತು. ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ವಾಡಿಕೆ ಸಂಪ್ರದಾಯವಿದೆ. ಈ ವೇಳೆ ದೈವ ನರ್ತಕರು ತುಳುನಾಡಿನ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಕಾಪು : ಡಿ.12ರಂದು ಸಮಾಜರತ್ನ ದಿ| ಲೀಲಾಧರ ಶೆಟ್ಟಿ ಮತ್ತು ದಿ.ವಸುಂಧರಾ ದ್ವಿತೀಯ ವರ್ಷದ ಪುಣ್ಯಸ್ಮರಣೆ ;  ಬೃಹತ್ ರಕ್ತದಾನ ಶಿಬಿರ – vishwanews24

ನಟ ರಿಷಬ್ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದವರೇ ಹರಕೆ ನೇಮೋತ್ಸವದ ವೇಳೆ ಎಣ್ಣೆಬೂಳ್ಯ ಸ್ವೀಕರಿಸಿದ್ದರು. ಈ ವೇಳೆ ದೈವ ನಟ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ಭಾವುಕ ಸನ್ನಿವೇಶ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ದೈವಾರಾಧಕರ ಪರ-ವಿರೋಧ ಚರ್ಚೆ ನಡೆದಿದೆ. ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ದೈವ ನರ್ತನ ನಿಯಮ ಮೀರಿ ವರ್ತಿಸಬಾರದು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ಕೋಲದ ಸಂಪ್ರದಾಯ ಮರೆತು ವರ್ತಿಸಿದ್ದಾರೆ. ಸದ್ಯ ದೈವ ನರ್ತಕರ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಯಾಗುತ್ತಿದೆ.

ಜಿಲ್ಲಾಮಟ್ಟದ ಬೋಚಿ ಸ್ಪರ್ಧೆಯಲ್ಲಿ ಕಾರ್ಕಳ ಅರುಣೋದಯ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ – viswhanews24

 

Leave a Reply