ಮಂಗಳೂರು: ಹಳಿ ತಪ್ಪಿದ ಗೂಡ್ಸ್ ರೈಲು – Vishwanews24
ಮಂಗಳೂರು: ಹಳಿ ತಪ್ಪಿದ ಗೂಡ್ಸ್ ರೈಲು
ಮಂಗಳೂರು: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಬಳಿ ಶುಕ್ರವಾರ ತಡರಾತ್ರಿ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ.
ಜು. 22ರ ಶುಕ್ರವಾರ ಸುಮಾರು 10.35 ಕ್ಕೆ ಈ ಘಟನೆ ನಡೆದಿದ್ದು, , ಮಂಗಳೂರು ಜಂಕ್ಷನ್ನಲ್ಲಿ ರೈಲಿನ ಎರಡು ಸರಕು ಬೋಗಿಗಳು ಹಳಿತಪ್ಪಿದ ಪರಿಣಾಮ ಪಕ್ಕದಲ್ಲೇ ಇದ್ದ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಕೂಡಲೇ ಸಿಬಂದಿಗಳು ಕಾರ್ಯಚರಣೆ ನಡೆಸಿ ಬೋಗಿಗಳನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಿಂದಾಗಿ ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕ ರೈಲುಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿದುಬಂದಿದೆ
ಬಂಟ್ವಾಳ : 4 ವರ್ಷದ ಫೇಸ್ಬುಕ್ ಪ್ರೀತಿ ; ಯವಕನೆಂದು ನಂಬಿಸಿ ಯವತಿಗೆ ವಂಚಿಸಿದ ಮಂಗಳಮುಖಿ – Vishwanews24
