ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ; ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ..- Vishwanews24
ನಯೋರೋ : ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್ಟಿಂಗ್ ಸ್ಪರ್ಧೆಯಲ್ಲಿ ಭಾರತೀಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಭಾರತ ಮೂಲದ ರವಿ ಪ್ರಕಾಶ್, ಸುನೀಲ್ ಕುಮಾರ್ ಕುಶ್ವಾಹ ಮತ್ತು ರಜನೀಶ್ ವರ್ಮಾ ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ಕಲಾಕೃತಿ ಮಾಡಿದ್ದು, ಆ ಮೂಲಕ ಮೊದಲ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ. .
ಫೆಬ್ರವರಿ 6-9ರಂದು ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಅಭ್ಯುದಯ ತಂಡದ ಸದಸ್ಯರಾಗಿರುವ ಮೂವರೂ ಮೈನಸ್ 25 ಡಿಗ್ರಿ ಉಷ್ಣಾಂಶದ ನಡುವೆ 4 ಮೀಟರ್ ಎತ್ತರದ ವರಾಹ ಮೂರ್ತಿ ನಿರ್ಮಿಸಿ ಮೊದಲ ಬಾರಿಗೆ ರಾಷ್ಟ್ರಕ್ಕೆ ಮೊದಲ ಬಹುಮಾನ ಸಿಗುವಂತೆ ಮಾಡಿ ದೇಶಕ್ಕೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಅಂದಹಾಗೆಯೇ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್ಟಿಂಗ್ ಕಾಂಪಿಟೀಷನ್ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ತಂಡ ಸಹ ಇದ್ದೇ ಆಗಿದೆ. ಇನ್ನು ಈ ಸ್ಪರ್ಧೆಯಲ್ಲಿ ರಷ್ಯಾ, ಥಾಯ್ ಲ್ಯಾಂಡ್, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಲಭಿಸಿದೆ.
