ಮಂಡ್ಯ :  22 ಅಕ್ರಮ ಕಲ್ಲು ಗಣಿಗಾರಿಕೆಗಳ ಪರವಾನಗಿ ರದ್ದು -Vishwanews24

Featured, ರಾಜ್ಯ ನ್ಯೂಸ್

ಮಂಡ್ಯ :  22 ಅಕ್ರಮ ಕಲ್ಲು ಗಣಿಗಾರಿಕೆಗಳ ಪರವಾನಗಿ ರದ್ದು -Vishwanews24

ಮಂಡ್ಯ : ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಮಂಡ್ಯ ಇವರ ಅಧ್ಯಕ್ಷತೆಯಲ್ಲಿ ಜುಲೈ 28 ರಂದು ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ(ಗಣಿ) ಸಭೆಯಲ್ಲಿ ಅವಧಿ ವಿಸ್ತರಿಸಿ ನೀಡಿದ ಕಲ್ಲು ಗಣಿಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದಿಂದ ಇದುವರೆಗೂ ಪರಿಸರ ವಿಮೋಚನಾ ಪತ್ರವನ್ನು ಪಡೆದು ಕಛೇರಿಗೆ ಹಾಜರುಪಡಿಸದೆ ಇರುವ 11 ಕಲ್ಲುಗಣಿಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿರುತ್ತದೆ. ಅದರಂತೆ ಮಂಡ್ಯ ಜಿಲ್ಲೆಯಾದ್ಯಂತ ಪರಿಸರ ವಿಮೋಚನಾ ಪತ್ರ ಪಡೆಯದೆ ಇದ್ದ 11 ಕಲ್ಲು ಗಣಿ ಗುತ್ತಿಗೆಗಳನ್ನು ಜುಲೈ 31 ರಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿರುತ್ತದೆ.

ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಕಾವಲು ಗ್ರಾಮದ ವ್ಯಾಪ್ತಿಯಲ್ಲಿನ 07 ಕ್ರಷರ್ ಘಟಕಗಳನ್ನು Karnataka Regulation of Stone Crusher Act 2011 ರ ಕಲಂ 6(1)(b) ರಂತೆ ಕ್ರಷರ್‌ ಸುರಕ್ಷತಾ ವಲಯವು ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ವ್ಯಾಪ್ತಿಯೊಳಗೆ ಇರತಕ್ಕದ್ದಲ್ಲ. ಪರವಾನಿಗೆದಾರರಿಗೆ ಕ್ರಷರ್ ಪರವಾನಿಗೆ ನೀಡಲಾಗಿರುವ ಪ್ರದೇಶವು ಲೋಕೋಪಯೋಗಿ ಇಲಾಖೆ ಹಾಗೂ ತಾಂತ್ರಿಕ ಅಧಿಕಾರಿಗಳ ವರದಿಯಂತೆ ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ಅಂತರದೊಳಗೆ ಬರುತ್ತಿರುವುದರಿಂದ ಕ್ರಷರ್ ಘಟಕಗಳಿಗೆ ನೀಡಲಾಗಿರುವ ಕ್ರಷರ್ ಲೈಸೆನ್ಸ್ (ಫಾರಂ-ಸಿ)ಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ರವರು ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ರದ್ದುಪಡಿಸಿರುತ್ತಾರೆ. ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ತೀರ್ಮಾನಂತೆ ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ಇವರು ಕ್ರಷರ್ ಪರವಾನಿಗೆಗೆ ಸಹಿ ಮಾಡಿ ವಿತರಿಸಿರುವ ಕ್ರಷರ್ ಪರವಾನಿಗೆಗಳನ್ನು ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ರವರು 22 ಕ್ರಷರ್‌ಗಳ ಕ್ರಷರ್ ಪರವಾನಿಗೆ(ಫಾರಂ-ಸಿ)ಯನ್ನು ರದ್ದುಪಡಿಸಿರುತ್ತಾರೆ.

ಮುಂದುವರೆದು ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಕಾವಲು ಗ್ರಾಮದ ವ್ಯಾಪ್ತಿಯಲ್ಲಿನ 04 ಕ್ರಷರ್ ಘಟಕಗಳನ್ನು Karnataka Regulation of Stone Crusher Act 2011 ರ ಕಲಂ 6(1)(b) ರಂತೆ ಕ್ರಷರ್ ಸುರಕ್ಷತಾ ವಲಯವು ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ವ್ಯಾಪ್ತಿಯೊಳಗೆ ಇರತಕ್ಕದ್ದಲ್ಲ. ಪರವಾನಿಗೆದಾರರಿಗೆ ಕ್ರಷರ್‌ ಪರವಾನಿಗೆ ನೀಡಲಾಗಿರುವ ಪ್ರದೇಶವು ಲೋಕೋಪಯೋಗಿ ಇಲಾಖೆ ಹಾಗೂ ತಾಂತ್ರಿಕ ಅಧಿಕಾರಿಗಳ ವರದಿಯಂತೆ ಜಿಲ್ಲಾ ಮುಖ್ಯ ರಸ್ತೆಯ 100 ಮೀಟರ್ ಅಂತರದೊಳಗೆ ಬರುತ್ತಿರುವುದರಿಂದ ಹಾಗೂ ಹಿರಿಯ ಭೂವಿಜ್ಞಾನಿ ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ಇವರು ಕ್ರಷರ್ ಪರವಾನಿಗೆಗೆ ಸಹಿ ಮಾಡಿ ವಿತರಿಸಿರುವುದರಿಂದ ಜುಲೈ 28 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯಲ್ಲಿ ರದ್ದುಪಡಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಜಿಲ್ಲೆ ರವರು 04 ಕ್ರಷರ್‌ಗಳ ಕ್ರಷರ್ ಪರವಾನಿಗೆ(ಫಾರಂ-ಸಿ)ಯನ್ನು ರದ್ದುಪಡಿಸಿರುತ್ತಾರೆ.