ಮಗಳು ಬಿಜೆಪಿ ಸೇರಿದ್ದು ನನ್ನ ಎದೆಗೆ ಚೂರಿ ಇರಿದಂತಾಗಿದೆ : ಕಾಗೋಡು ತಿಮ್ಮಪ್ಪ – Vishwanews24
ಮಗಳು ಬಿಜೆಪಿ ಸೇರಿದ್ದು ನನ್ನ ಎದೆಗೆ ಚೂರಿ ಇರಿದಂತಾಗಿದೆ : ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ಮಗಳು ಬಿಜೆಪಿ ಸೇರಿದ್ದು ನನ್ನ ಎದೆಗೆ ಚೂರಿ ಇರಿದಂತಾಗಿದೆ. ಆಕೆ ಈ ರೀತಿ ಮಾಡುತ್ತಾಳೆ ಎಂದು ನಾನು ಕನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ. ಮಗಳು ಈ ರೀತಿ ಇದ್ದಾಳೆ ಎನ್ನುವುದು ನನ್ನ ದೌರ್ಭಾಗ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿ ಡಾ.ರಾಜನಂದಿನಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದರು. ಈ ಸುದ್ದಿ ನನಗೆ ಈಗಷ್ಟೇ ಗೊತ್ತಾಗಿದೆ. ಈ ರೀತಿ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಆಲೋಚಿಸಿರಲಿಲ್ಲ. ನಾನು ರಾಜಕಾರಣದಲ್ಲಿ ಸ್ಥಿರತೆ ಮತ್ತು ಬದ್ಧತೆ ಉಳಿಸಿಕೊಂಡು ಬಂದವನು. ನಾವು ಅದನ್ನೇ ಅನುಸರಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಆ ಸಂತೋಷ ಮತ್ತು ನೆಮ್ಮದಿ ನಮಗಿದೆ ಎಂದರು.
ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲ : ಎಸ್. ಅಂಗಾರ – Vishwanews24
ಏನೇ ಆದರೂ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಕಾಂಗ್ರೆಸ್ ಪರವಾಗಿ ನಿಲ್ಲುತ್ತೇನೆ ಹಾಗೂ ಅದರ ಪರವಾಗಿ ಕೆಲಸ ಮಾಡುತ್ತೇನೆ. ಮಗಳಿಗೆ ಯಾರೋ ಹಿಂದಿನಿಂದ ಈ ರೀತಿ ಮಾಡಿಸಿದ್ದಾರೆ. . ಅವಳನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವಳು ತನ್ನ ಬಳಿ ಯಾವುದೇ ಬೇಸರ ಹೇಳಿಕೊಂಡಿಲ್ಲ. ನಾನು ಅವಳನ್ನು ಖರ್ಗೆ ಹತ್ತಿರ ಕರೆದುಕೊಂಡು ಹೋಗಿದ್ದೆ. ಅವಕಾಶ ಇದ್ದರೆ ನೋಡೋಣ ಎಂದಿದ್ದರು. ಕಾಂಗ್ರೆಸ್ನಲ್ಲಿಯೇ ಇದ್ದು ರಾಜಕೀಯವಾಗಿ ಬೆಳೆಯಬಹುದಾಗಿತ್ತು. ನನ್ನ ಹತ್ತಿರ ಯಾವುದನ್ನೂ ಹೇಳಿಕೊಂಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿ ಬಿಜೆಪಿ ಸೇರ್ಪಡೆ – Vishwanews24
