ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ 185 ಹೈನುಗಾರ ಸದಸ್ಯರಿಗೆ ಕಿಟ್ ವಿತರಣೆ.vishwanews24
ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ 185 ಹೈನುಗಾರ ಸದಸ್ಯರಿಗೆ ಕಿಟ್ ವಿತರಣೆ.
ಕಾಪು: ಮಜೂರು ಹಾಲು ಉತ್ಪಾದಕರ ಸಹಕಾರಿ ಸಂಘದ 185 ಹೈನುಗಾರ ಸದಸ್ಯರಿಗೆ ಪಡಿತರ ಕಿಟ್ ವಿತರಣಾ ಕಾರ್ಯಕ್ರಮ ಗುರುವಾರ ನಡೆಯಿತು.



ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾ ಮಂಡಳ ನಿರ್ದೇಶಕ ಕಾಪು ದಿವಾಕರ್ ಶೆಟ್ಟಿ ಮಾತನಾಡಿ ” ಕೊರೋನಾ ಎಂಬ ಮಹಾಮಾರಿಯು ಇಡೀ ಜಗತ್ತನ್ನು ತಲ್ಲಣಗೊಳಿಸಿ,ಭಾರತ ದೇಶ ಲಾಕ್-ಡೌನ್ ಮಾಡುವ ಪರಿಸ್ಥಿತಿ ಎದುರಾಯಿತು,ಇಂತಹ ಸಂಧರ್ಭದಲ್ಲಿ ದಿನಗೂಲಿ ಕಾರ್ಮಿಕರು, ಬಡ ಮಧ್ಯಮ ಜನರ ಜೀವನ ಅಸ್ತವ್ಯಸ್ತವಾಯಿತು.ಇಂತಹ ಸಂಧರ್ಭದಲ್ಲಿ ಎಲ್ಲಾ ಸಾರ್ವಜನಿಕರಲ್ಲಿ ವಿನಂತಿ ಕಡ್ಡಾಯವಾಗಿ ಸರ್ಕಾರದ ನಿಯಮ ಪಾಲಿಸುವ ಮೂಲಕ ಕೊರೋನಾ ನಿರ್ಮೂಲನೆಗೆ ಸಹಕರಿಸಬೇಕು,ಪ್ರತಿಯೊಬ್ಬ ಹೈನುಗಾರರು ಮನೆಮನೆಯಲ್ಲಿ ತರಕಾರಿ ಕೃಷಿ ಬೆಳೆಸುವ ಮೂಲಕ ನಿಮ್ಮ ಸ್ವಂತತೆ ಕಾಪಡಿಕೊಳ್ಳಬೇಕು,ಲಾಕ್-ಡೌನ್ ಸಮಯದಲ್ಲಿ ಈ ಕಿಟ್ ವಿತರಣೆ ಅಗತ್ಯವಾಗಿದೆ ಎಂದರು.


ಸಮಾಜ ಸೇವಕ ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರಂದಾಡಿ ಲೀಲಾಧರ ಶೆಟ್ಟಿ,ಕಾಪು ಎಎಸ್ಐ ರಾಜೇಂದ್ರ ಮಣಿಯಾಣಿ, ವಿಸ್ತರಣಾಧಿಕಾರಿ ಯಶವಂತ್,ಕಾರ್ಯನಿರ್ವಾಹಣಾಧಿಕಾರಿ ಗುರುರಾಜ್, ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಸಾಲಿಯಾನ್, ವಿಶ್ವನ್ಯೂಸ್24 (9343846360)
