ಮಡಿಕೇರಿ :  ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಅಬೂಬ್ಬಕ್ಕರ್ ಅರೆಸ್ಟ್.. Vishwanews24

Featured, ರಾಜ್ಯ ನ್ಯೂಸ್

ಮಡಿಕೇರಿ :  ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಅಬೂಬ್ಬಕ್ಕರ್ ಅರೆಸ್ಟ್..

ಮಡಿಕೇರಿ: ಮೇಯಲು ಬಿಟ್ಟಿದ್ದ ಮೂಕ ಪ್ರಾಣಿ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ನಡದಿದೆ.

ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬೂಬ್ಬಕ್ಕರ್ ಸಿದ್ಧಿಕ್ ಬಂದಿತ ಆರೋಪಿಯಾಗಿದ್ದು, ಗ್ರಾಮಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮದ ಸಿ.ಎ. ದೇವಯ್ಯ ಎಂಬುವವರು ಹಸುವನ್ನು ಮೇಯಲು ಬಿಟ್ಟು ಸಂತೆಗೆ ತೆರಳಿದ್ದರು.ಸಂತೆಯಿಂದ ವಾಪಸ್ ಬಂದಾಗ ತಮ್ಮ ಹೊಲದ ದಾರಿಯಲ್ಲಿ ಬೈಕ್ ನಿಂತಿರುವುದನ್ನು ದೇವಯ್ಯ ಕಂಡಿದ್ದಾರೆ.ಬಳಿಕ ಮೇಯಲು ಕಟ್ಟಿದ್ದ ಹಸುವನ್ನು ಮನೆಗೆ ಕರೆದುಕೊಂಡು ಬರಲು ಹೊಲದ ಬಳಿ ತೆರಳಿದ್ದಾರೆ.ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ತಮ್ಮ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದನ್ನು ಕಣ್ಣಾರೆ ಕಂಡಿದ್ದಾರೆ.

ಖ್ಯಾತ ಉದ್ಯಮಿ ಟೊಯೊಟಾ ಕಿರ್ಲ್ಕೋಸ್ಕರ್‌ ಉಪಾಧ್ಯಕ್ಷ ವಿಕ್ರಂ ಕಿರ್ಲ್ಕೋಸ್ಕರ್‌ ಹೃದಯಾಘಾತ ನಿಧನ – Vishwanews24

ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಆರೋಪಿಯನ್ನು ಬೆಂಬತ್ತಿ ಕೊನೆಗೂ ಹಿಡಿಯಲು ಯಶಸ್ವಿಯಾಗಿದ್ದು ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಭಾರತೀಯ ದಂಡ ಸಂಹಿತೆಯ ಕಲಂ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಂಗಳೂರು : ಕುಕ್ಕರ್‌ ಬಾಂಬ್‌ ಸ್ಫೋಟದ ಶಂಕಿತ ಉಗ್ರ ಶಾರೀಕ್‌ ತುಸು ಚೇತರಿಕೆ: ಆಸ್ಪತ್ರೆಗೆ ಬಿಗಿ ಭದ್ರತೆ.. Vishwanews24

Leave a Reply