ಮಡಿಕೇರಿ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ : ಕಾರಿನಲ್ಲಿದ್ದ ನಾಲ್ವರು ಮೃತ್ಯು – vishwanews24

Featured, ದಕ್ಷಿಣ ಕನ್ನಡ

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ : ಕಾರಿನಲ್ಲಿದ್ದ ನಾಲ್ವರು ಮೃತ್ಯು

ಮಡಿಕೇರಿ: ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಕಾರಿನಲ್ಲಿದ್ದ ನಿಹಾದ್, ರಿಝ್ವಾನ್, ರಾಖಿಬ್ ಎಂಬವರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮೃತ ಓರ್ವ ಯುವಕನ ಗುರುತು ಇನ್ನಷ್ಟೇ ತಿಳಿದುಬರಬೇಕಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸುಬ್ರಮಣ್ಯ : ನಾಪತ್ತೆಯಾಗಿದ್ದ ಆಂಬ್ಯುಲೆನ್ಸ್ ಚಾಲಕನ ಮೃತದೇಹ ಪತ್ತೆ – vishwanews24

ಗೊಣಿಕೊಪ್ಪ ಮತ್ತು ಹುಣಸೂರಿನ ನಾಲ್ವರು ಯುವಕರು ದ.ಕ. ಜಿಲ್ಲೆಯ ಉಳ್ಳಾಲಕ್ಕೆ ಗುರುವಾರ ಕಾರಿನಲ್ಲಿ ತೆರಳಿದ್ದವರು ಅಲ್ಲಿಂದ ಇಂದು ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಾರಿಗೆ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಕೊಡಗು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆಯುತ್ತಿದ್ದಾರೆ.

ಉಡುಪಿ:  ಕೋಳಿ ಅಂಕದ ಬಗ್ಗೆ ಅವಹೇಳನಕಾರಿ ಹೇಳಿಕೆ  : ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ  ಪ್ರಸಾದ್ ಕಾಂಚನ್ ಕ್ಷಮೆಯಾಚಿಸಲಿ – vishwanews24

Leave a Reply