ಮಣಿಪಾಲ: ಅಪಘಾತದಲ್ಲಿ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯ– ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದ ಎಂ ಐ ಟಿ ವಿದ್ಯಾರ್ಥಿ – Vishwanews24

Featured, ಉಡುಪಿ

ಮಣಿಪಾಲ: ಅಪಘಾತದಲ್ಲಿ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯ– ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದ  ಎಂ ಐ ಟಿ ವಿದ್ಯಾರ್ಥಿ

ಮಣಿಪಾಲ: 19 ವರ್ಷದ ಎಂ ಐ ಟಿ ವಿದ್ಯಾರ್ಥಿ ವೆಮುಲಾ ಸುದರ್ಶನ್ ಚೌಧರಿ (ಆಂಧ್ರಪ್ರದೇಶ) ಇವರಿಗೆ ಮಣಿಪಾಲ-ಉಡುಪಿ ರಸ್ತೆಯಲ್ಲಿಅ. 9ರಂದು ರಾತ್ರಿ 8. 40ರ ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಆಂಧ್ರಪ್ರದೇಶದ ವೆಮುಲ ಅಲೇಖಾ ಪ್ರಸಾದ್ ಇವರ ಮಗನಾದ ವೆಮುಲಾ ಸುದರ್ಶನ್ ಚೌಧರಿ ಅವರು ಅಪಘಾತದ ಪರಿಣಾಮದಿಂದ ತೀವ್ರತರವಾದ ಗಾಯವನ್ನು ಹೊಂದಿದ್ದರು.

ವೆಮುಲಾ ಸುದರ್ಶನ್ ಚೌಧರಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ವೆಮುಲಾ ಸುದರ್ಶನ್ ಚೌಧರಿ ಅವರ ತಂದೆ ಮತ್ತು ಅವರ ಕುಟುಂಬ ಸದಸ್ಯರು ಅಂಗಾಂಗ ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರ ಅನ್ವಯ ವೆಮುಲಾ ಸುದರ್ಶನ್ ಚೌಧರಿ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.

ನಿಷೇಧಿತ ಡ್ರಗ್ ಸೇವನೆ ಆರೋಪ : ಭಾರತದ ಡಿಸ್ಕಸ್ ಥ್ರೋ ಆಟಗಾರ್ತಿ ಕಮಲ್‌ಪ್ರೀತ್ ಕೌರ್ ಗೆ 3 ವರ್ಷ ನಿಷೇಧ – Vishwanews24

ಜೀವನಸಾರ್ಥಕತೆ ಪ್ರೋಟೋಕಾಲ್ ಗಳು ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ, ಯಕೃತ್ ಕೆ ಎಂ ಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ಮಂಗಳೂರಿಗೆ, ಶ್ವಾಸಕೋಶ ಆಸ್ಟರ್ ಆಸ್ಪತ್ರೆ ಬೆಂಗಳೂರಿಗೆ, ಒಂದು ಮೂತ್ರಪಿಂಡ ಎ ಜೆ ಆಸ್ಪತ್ರೆ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು.

ವೆಮುಲ ಅಲೇಖಾ ಪ್ರಸಾದ್ ಮತ್ತು ಕುಟುಂಬ ಸದಸ್ಯರು “ಅಂಗಾಂಗ ದಾನ ಒಂದು ಪುಣ್ಯದ ಕೆಲಸ. ಸುದರ್ಶನ್ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ” ಎಂದು ತಿಳಿಸಿದ್ದಾರೆ.

ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ “ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಎಂದು ತಿಳಿಸಿ ಅಂಗ ದಾನ ಮಾಡಲು ನಿರ್ಧರಿಸಿದ ಶ್ರೀ ವೆಮುಲಾ ಸುದರ್ಶನ್ ಚೌಧರಿ ಕುಟುಂಬಕ್ಕೆ ಕ್ರತಜ್ಞತೆ ಸಲ್ಲಿಸಿದರು. “ಅಂಗಾಂಗ ದಾನದ ಬಗ್ಗೆ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿ.” ಎಂದು ಅಭಿಪ್ರಾಯಪಟ್ಟರು.

BREAKING _ ಹಿಜಾಬ್ ವಿವಾದ : ಸುಪ್ರೀಂಕೋರ್ಟ್​ನಿಂದ ವಿಭಜಿತ ತೀರ್ಪು ಪ್ರಕಟ..

ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಮತ್ತು ಬೆಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಸ್ವೀಕರಿಸುವ ಆಸ್ಪತ್ರೆಗೆ ವರ್ಗಾಯಿಸಲಾಯಿತು.

Leave a Reply