ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್‌ಗೆ ನುಗ್ಗಿದ ಆಂಬುಲೆನ್ಸ್ – vishwanews24

Featured, ಉಡುಪಿ

ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್‌ಗೆ ನುಗ್ಗಿದ ಆಂಬುಲೆನ್ಸ್

ಮಣಿಪಾಲ : ಆಂಬುಲೆನ್ಸ್ ವಾಹನವೊಂದು ಮಣಿಪಾಲದಿಂದ ಉಡುಪಿಯತ್ತ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮೆಡಿಕಲ್ ಶಾಪ್ ಒಳಗೆ ನುಗ್ಗಿದ ಘಟನೆ ಲಕ್ಷ್ಮೀಂದ್ರ ನಗರದ ಬಳಿ ನಡೆದಿದೆ.

ಆಂಬುಲೆನ್ಸ್ ನಲ್ಲಿ ಚಾಲಕನ ಮಾತ್ರ ಇದ್ದು, ಲಕ್ಷ್ಮೀಂದ್ರ ನಗರದ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಒಮ್ಮೆಗೆ ಬಲಕ್ಕೆ ತಿರುಗಿದ ಆಂಬುಲೆನ್ಸ್, ರಸ್ತೆಯ ಪಕ್ಕದಲ್ಲಿದ್ದ ಜನೌಷಧಿ ಕೇಂದ್ರದೊಳಗೆ ನುಗ್ಗಿದೆ. ಪಕ್ಕದ ಅಂಗಡಿಗಳಿಗೂ ಹಾನಿಯಾಗಿದೆ.

ಪುತ್ತೂರು:  ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು – vishwanews24

ಇನ್ನು ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Leave a Reply