ಮಣಿಪಾಲ : ನಿಯಮ ಮೀರಿ ಕಾರ್ಯಾಚರಣೆ: 2 ಬಾರ್ & ರೆಸ್ಟೋರೆಂಟ್‌ಗಳ ಪರವಾನಿಗೆ ರದ್ದು ಮಾಡುವಂತೆ ಡಿಸಿ ಸೂಚನೆ – vishwanews24

Featured, ಉಡುಪಿ

ಮಣಿಪಾಲ : ನಿಯಮ ಮೀರಿ ಕಾರ್ಯಾಚರಣೆ: 2 ಬಾರ್ & ರೆಸ್ಟೋರೆಂಟ್‌ಗಳ ಪರವಾನಿಗೆ ರದ್ದು ಮಾಡುವಂತೆ ಡಿಸಿ ಸೂಚನೆ

ಉಡುಪಿ : ಮಣಿಪಾಲದಲ್ಲಿ ನಿಯಮ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಪರವಾನಿಗೆ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದ್ದಾರೆ.

ಮಣಿಪಾಲದ ಅಂಬಾಗಿಲು ರಸ್ತೆಯಲ್ಲಿರುವ ಬಾರ್ ಹಾಗೂ ಪರ್ಕಳ ರಸ್ತೆಯಲ್ಲಿರುವ ಪಬ್ ಪರವಾನಿಗೆ ರದ್ದತಿಗೆ ಡಿಸಿ ಸೂಚನೆ ನೀಡಿದ್ದಾರೆ.

ಈ ಎರಡೂ ಬಾರ್ ಅಲ್ಲದೆ ಇನ್ನೂ ಹಲವು ಬಾರ್‌ಗಳಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೂ ಪಬ್‌ಗಳನ್ನು ತೆರೆದಿಡುತ್ತಿರುವುದು, ಅಲ್ಲದೇ ಪಬ್‌ನಲ್ಲಿ ಪಾರ್ಟಿ, ಫ್ಯಾಶನ್ ಶೋ, ಡ್ಯಾನ್ಸ್ ಪಾರ್ಟಿ ಮನೋರಂಜನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇನ್ನು ಈ ಬಗ್ಗೆ ಪೊಲೀಸರು ಹಲವು ಬಾರಿ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಕಾಪು: ಯುವತಿ ನಾಪತ್ತೆ – vishwanews24

Leave a Reply