ಮಣಿಪಾಲ : ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ – Vishwnaews24

Featured, ಉಡುಪಿ

ಮಣಿಪಾಲ : ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ

ಮಣಿಪಾಲ: ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ಗುರುವಾರವೇ (ಜೂ.2) ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಲ್ಲಿ ಸಮಗ್ರ ವರದಿ ಕೇಳಿದ್ದೇನೆ.

ಸಚಿವರು ಗುರುವಾರ ವರದಿ ನೀಡಲಿದ್ದಾರೆ. ಹಾಗೆಯೇ ವಿವಿಧ ಮಠದ ಸ್ವಾಮೀಜಿಗಳು, ಬೇರೆಯವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪತ್ರವನ್ನು ಬರೆದಿದ್ದಾರೆ ಮತ್ತು ಪರಿಷ್ಕರಣೆಯಲ್ಲಿ ಆತಂಕ ಪಡುವ ವಿಷಯ ಏನೂ ಇಲ್ಲ ಎಂಬ ವಾದವೂ ಇದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಶಿಕ್ಷಣ ಸಚಿವರ ವರದಿಯನ್ನು ಆಧರಿಸಿ, ವಾಸ್ತವಾಂಶ ಏನಿದೆ ಎಂಬುದನ್ನು ತಿಳಿದು ಜೂನ್‌ 2 ರಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಯಾರ್ಯಾರು ತಮ್ಮ ಪಠ್ಯ, ಪದ್ಯಗಳನ್ನು ವಾಪಸ್‌ ಪಡೆಯಲು ಪತ್ರ ಬರೆದಿದ್ದಾರೋ ಅವರೊಂದಿಗೂ ಮಾತುಕತೆ ನಡೆಸಲಿದ್ದೇನೆ ಎಂದರು.

ಮಂಗಳೂರು ಹಿಜಾಬ್ ವಿವಾದ : ವಿದ್ಯಾರ್ಥಿನಿಯರು ತಮ್ಮ ವಿರುದ್ಧ ನೀಡಿದ್ದ ಹೇಳಿಕೆ ನೋಡಿ ಅಚ್ಚರಿ ಹಾಗೂ ಮನಸ್ಸಿಗೆ ನೋವಾಗಿದೆ : ಯು.ಟಿ.ಖಾದರ್‌ – Vishwanews24

 

Leave a Reply