ಮತದಾನ ಮಾಡುವ ಮುನ್ನ ತಾಯಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ – Vishwanews24

Featured, ದೇಶ, ರಾಷ್ಟ್ರ ನ್ಯೂಸ್

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡುವ ಮುನ್ನ ತಾಯಿ ಹೀರಾಬೆನ್‌ ಅವರ ಆಶೀರ್ವಾದ ಪಡೆದರು.

ವ್ಯಾಪಕ ಭದ್ರತೆಯೊಂದಿಗೆ ರಾನಿಪ್‌ನ ಮತಗಟ್ಟೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ನೋಡಲು ಸಾವಿರಾರು ಜನರ ಜಮಾವಣೆಗೊಂಡಿದ್ದರು. ವ್ಯಾಪಕ ಭದ್ರತೆ ಕೈಗೊಳ್ಳಲಾಗಿದ್ದು, ಸ್ವಮಲ್ಪ ದೂರ ತೆರದ ವಾಹನದಲ್ಲಿ ಆಗಮಿಸಿ ಹಕ್ಕು ಚಲಾವಣೆ ಮಾಡಿದರು.

ಕುಂಭ ಮೇಳದಲ್ಲಿ ಸ್ನಾನ ಮಾಡಿ ಪವಿತ್ರವಾಗುವ ಅನುಭವದಂತೆ , ಲೋಕತಂತ್ರದ ಪವಿತ್ರ ಕಾರ್ಯ ಮತದಾನ ಮಾಡಿದ ಬಳಿಕ ಆಗಿದೆ ಎಂದು ಪ್ರಧಾನಿ ಹೇಳಿದರು.

ಮೊದಲ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ನಾನು ಸ್ವಾಗತಿಸುತ್ತೇನೆ ಮತ್ತು ಶುಭಕಾಮನೆಗಳನ್ನು ಸಲ್ಲಿಸುತ್ತೇನೆ. ಮೊದಲ ಬಾರಿ ಮತದಾನ ಮಾಡುವವರು ದೇಶದ ಭವಿಷ್ಯವನ್ನು ಉಜ್ವಲ ಮಾಡಲು ಮತದಾನ ಮಾಡಬೇಕಾಗಿದೆ ಎಂದರು.

ಉಗ್ರರ ಶಸ್ತ್ರ ಐಇಡಿ , ಪ್ರಜಾಪ್ರಭುತ್ವದ ಶಸ್ತ್ರ ವೋಟರ್‌ ಐಡಿ. ವೋಟರ್‌ ಐಡಿ ಎನ್ನುವುದು ಐಇಡಿಗಿಂತಲೂ ಶಕ್ತಿ ಶಾಲಿ ಎಂದು ಪ್ರಧಾನಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶದ 10, ಬಿಹಾರ್​ನ 5, ಅಸ್ಸಾಂನ 4, ಗುಜರಾತ್​ನ 26, ತ್ರಿಪುರಾದ 1, ದಮನ್​ ಮತ್ತು ಡಿಯುನ 1, ದಾದ್ರ​ ಮತ್ತು ನಗರ್​ ಹವೇಲಿಯ 1, ಪಶ್ಚಿಮ ಬಂಗಾಳದ 5, ಮಹಾರಾಷ್ಟ್ರದ 14, ಒಡಿಶಾದ 6, ಗೋವಾದ 2, ಕರ್ನಾಟಕದ 14, ಕೇರಳದ 20 ಮತ್ತು ಛತ್ತೀಸ್​ಗಢದ 11 ಕ್ಷೇತ್ರಗಳು ಸೇರಿ ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲೆಡೆ ಶಾಂತಿಯುವಾಗಿ ಮತದಾನವಾಗುತ್ತಿದೆ