ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಸಿಎಂ, ಡಿಸಿಎಂ ಫೋಟೋ ಹೊಂದಿದ್ದ 73 ಕುಕ್ಕರ್ ವಶಕ್ಕೆ ಪಡೆದ ಅಧಿಕಾರಿಗಳು – Vishwanews24

Featured, ರಾಜ್ಯ ನ್ಯೂಸ್

ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಸಿಎಂ, ಡಿಸಿಎಂ ಫೋಟೋ ಹೊಂದಿದ್ದ 73 ಕುಕ್ಕರ್ ವಶಕ್ಕೆ ಪಡೆದ ಅಧಿಕಾರಿಗಳು

ತುಮಕೂರು: ಲೋಕಸಭಾ ಚುನಾವಣೆ  ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹೊತ್ತಿನಲ್ಲಿ ರಾಜಕೀಯ ಮುಖಂಡರು ಮತದಾರರನ್ನು ಸೆಳೆಯಲು ಆಮೀಷ ಒಡ್ಡಲು ಮುಂದಾಗುತ್ತಿದ್ದಾರೆ. ಕುಣಿಗಲ್‍ನಲ್ಲಿ ಮತದಾರರಿಗೆ ಹಂಚಲು ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ 73 ಕುಕ್ಕರ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕುಕ್ಕರ್ ಬಾಕ್ಸ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಸಂಸದ, ಶಾಸಕರ ಭಾವಚಿತ್ರಗಳಿವೆ. ಜೊತೆಗೆ ಬಾಕ್ಸ್ ಮೇಲೆ ಹೊಸ ವರ್ಷ ಹಾಗೂ ಸಂಕ್ರಾತಿ ಶುಭಾಶಯಗಳು ಎಂದು ಮುದ್ರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಎಲ್ಲಾ ಕುಕ್ಕರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ಹಿಂದಿನ ಅವಧಿಯಲ್ಲಿ ಆದ ಅಭಿವೃದ್ಧಿಯನ್ನು ಪರಿಗಣಿಸಿ ಜನತೆ ನನ್ನನ್ನು ಬೆಂಬಲಿಸುತ್ತಾರೆ : ಜಯಪ್ರಕಾಶ್ ಹೆಗ್ಡೆ – Vishwanews24

ಕುಣಿಗಲ್ ಪಟ್ಟಣದ ಮಲ್ಲಿಪಾಳ್ಯದ ಕಾಂಗ್ರೆಸ್ ಪುರಸಭಾ ಸದಸ್ಯ ನಾಗೇಂದ್ರ ಅವರಿಗೆ ಸೇರಿದ ಗೋದಾಮಿನಲ್ಲಿ ಕುಕ್ಕರ್‌ಗಳನ್ನು ಸಂಗ್ರಹಿಸಿಡಲಾಗಿತ್ತು

Leave a Reply