ಮತ್ತೆ ಬಂದಿದೆ ಉಡುಪಿ ಉತ್ಸವ ಇಂದಿನಿಂದ ಶುರುವಾಗಲಿದೆ ಹಬ್ಬದ ಸಂಭ್ರಮ,ಬುರ್ಜ್ ಖಲೀಫಾ ಈ ಸಲದ ಮೆರಗು.

Featured, ಉಡುಪಿ, ಜಿಲ್ಲೆ

ಮತ್ತೆ ಬಂದಿದೆ ಉಡುಪಿ ಉತ್ಸವ ಇಂದಿನಿಂದ ಶುರುವಾಗಲಿದೆ ಹಬ್ಬದ ಸಂಭ್ರಮ,ಬುರ್ಜ್ ಖಲೀಫಾ ಈ ಸಲದ ಮೆರಗು.

ಉಡುಪಿ: ಉಡುಪಿ ಕಲ್ಸಂಕ ರೋಯಲ್ ಗಾರ್ಡನಲ್ಲಿ ಇಂದಿನಿಂದ ಉಡುಪಿ ಉತ್ಸವ ಪ್ರಾರಂಭವಾಗಲಿದೆ.ಉಡುಪಿಯ ಶಾಸಕ ರಘುಪತಿ ಭಟ್ ಹಾಗೂ ನಗರಸಭಾ ಸದಸ್ಯೆ ಗೀತಾ ವಾಗ್ಲೆ ಈ ಕಾರ್ಯಕ್ರಮವನ್ನ ಸಂಜೆ 6 ಗಂಟೆಗೆ ಉದ್ಘಾಟಿಸಲಿರುವರು.
ಇಂದಿನಿಂದ ಪ್ರತಿ ದಿನ ಸಂಜೆ 4 ಗಂಟೆಯಿಂದ 9 ಗಂಟೆಯವರೆಗೆ ತೆರೆದುಕೊಳ್ಳುತ್ತಿರುವ ಈ ಉತ್ಸವ ಕುಟುಂಬದ ಪರಿಪೂರ್ಣ ಬಯಕೆಯನ್ನ ಒಂದೇ ಸೂರಿನಡಿ ಪೂರೈಸುತ್ತದೆ.ಗೃಹಪಯೋಗಿ ವಸ್ತುಗಳು, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳು,ಮಕ್ಕಳ ಆಟೋಟ ವಸ್ತುಗಳು, ಚಿತ್ತಾಪಹರಿಸುವ ವಿವಿಧ ರಾಜ್ಯಗಳ ಸಾಂಪ್ರಾದಾಯಿಕ ಆಧುನಿಕ ಶೈಲಿಯ ಬಟ್ಟೆ ಬರೆಗಳು,ಪುಸ್ತಕ, ವಸ್ತ್ರಮಳಿಗೆ ಹೀಗೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗುತ್ತದೆ.
ಈ ಭಾರಿಯ ವಿಶೇಷ ದುಬೈಯ ಬುರ್ಜ್ ಖಲೀಫಾ ಕಟ್ಟಡದ ಜತೆ ಉಡುಪಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶವಿದೆ.