ಮಮತಾ ಬ್ಯಾನರ್ಜಿ ಭದ್ರ ಕೋಟೆಗೆ ನುಗ್ಗಲಿರುವ ಚಾಣಕ್ಯ …

Featured, ರಾಷ್ಟ್ರ ನ್ಯೂಸ್

ನವದೆಹಲಿ : ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ತೀವ್ರವಾದ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೆಂಡಾಮಂಡಲರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂಬರುವ ಆಗಸ್ಟ್ 11 ರಂದು ಕೋಲ್ಕೊತಾಕ್ಕೆ ಭೇಟಿ ನೀಡಿ ಬ್ರಹತ್ ಪ್ರತಿಭಟನಾ ರ್ಯಾಲಿ ನಡೆಸುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಷಾ ಅವರು ಆಗಸ್ಟ್ 11 ರಂದು ನಡೆಸುವ ಪ್ರತಿಭಟನಾ ರ್ಯಾಲಿಗೆ ಪಶ್ಚಿಮ ಬಂಗಾಳ ಸರಕಾರ ಅನುಮತಿ ನೀಡಲು ನಿರಾಕರಿಸಿದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ,ಪೋಲೀಸರು ತನ್ನನ್ನು ಬಂಧಿಸಿದರೂ ಸರಿಯೇ ನಾನು ಕೋಲ್ಕತ್ತಾಗೆ ತೆರಳುವುದು ಶತ ಸಿದ್ದ ಎಂದು ಅಮಿತ್ ಷಾ ಗುಡುಗಿದ್ದಾರೆ

ಅಮಿತ್ ಶಾ ಪತ್ರಿಕಾ ಹೇಳಿಕೆ ಪ್ರಕಟ ಆಗುತ್ತಿದ್ದಂತೆ ಅಮಿತ್ ಶಾ ರ್ಯಾಲಿಗೆ ಕೋಲ್ಕತ್ತಾ ಪೋಲೀಸರಿಂದ ಅನುಮತಿ ನಿರಾಕರಣೆ ಎನ್ನುವ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬೆನ್ನಲೇ ಆಗಸ್ಟ್ 11ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಅಮಿತ್ ಶಾ ಅವರ ರ್ಯಾಲಿಗೆ ಉದಾಗಲೇ ಅನುಮತಿ ನೀಡಲಾಗಿದೆ ಎಂದು ಕೋಲ್ಕತ್ತಾ ಪೋಲೀಸರು ಹೇಳಿದ್ದಾರೆ. ಕೋಲ್ಕತ್ತಾ ರ್ಯಾಲಿಗೆ ಅನುಮತಿ ನೀಡಿದ ಕುರಿತು ಪೋಲೀಸ್ ಇಲಾಖೆಯಿಂದ ನಮಗೆ ಇದುವರೆಗೆ ಯಾವ ಅಧಿಕೃತ ಮಾಹಿತ್ತಿ ಬಂದಿಲ್ಲ ಎಂದು ಬಿಜೆಪಿ ಯುವ ಮೋರ್ಛಾ ಹೇಳಿದೆ.ಒಟ್ಟಾರೆಯಾಗಿ ಅಕ್ರಮ ವಲಸಿಗರ ವಿರುದ್ಧ ಬಿಜೆಪಿ ಸಮರ ಸರಿರುವುದಂತೂ ಖಚಿತವಾಗಿದೆ.