ಮಲ್ಪೆ : ಬಂದರಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಹೂಳಿನಲ್ಲಿ ಸಿಲುಕಿ ಮೀನುಗಾರ ಮೃತ್ಯು – Vishwanews24

Featured, ಉಡುಪಿ

ಮಲ್ಪೆ : ಬಂದರಿನಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಹೂಳಿನಲ್ಲಿ ಸಿಲುಕಿ ಮೀನುಗಾರ ಮೃತ್ಯು

ಮಲ್ಪೆ: ಬಂದರಿನಲ್ಲಿ ಹೋಗುತ್ತಿದ್ದ ವೇಳೆ ಮೀನುಗಾರರೊಬ್ಬರು ಕಾಲು ಜಾರಿ ನೀರಿಗೆ ಬಿದ್ದು ಹೂಳಿನಲ್ಲಿ ಸಿಲುಕಿಕೊಂಡು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಟ್ಪಾಡಿ ಮಟ್ಟು ನಿವಾಸಿ ಸಂತೋಷ್ ತಿಂಗಳಾಯ(35) ಮೃತಪಟ್ಟವರು.

ಉಡುಪಿ: ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಪ್ರಖ್ಯಾತ್ ಶೆಟ್ಟಿ ಅರ್ಜಿ ಸಲ್ಲಿಕೆ – Vishwanews24

ಮೀನು ಗಾರರಾಗಿದ್ದ ಇವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಲ್ಪೆಯ ಜೈಬಲರಾಮ್ ಲೈಲ್ಯಾಂಡ್ ಬೋಟ್ ಪಡ್ಡೆಗೆ ಹೋಗುತ್ತಿದ್ದಾಗ ಬಂದರ್ ನ ಒಳಗೆ ಕಾಲು ಜಾರಿ ನೀರಿಗೆ ಬಿದ್ದು ಹೂಳಿನಲ್ಲಿ ಸಿಲುಕಿಕೊಂಡಿದ್ದರು. ತಕ್ಷಣ ಅವರನ್ನು ಹುಡುಕಾಡಿ ಹೂಳಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಯಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸಂತೋಷ್ ಅವರ ಮೃತ ದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಮಲ್ಪೆ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ಅಕ್ರಮ ಜಾನುವಾರು ಸಾಗಾಟ.. ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು – Vishwanews24

Leave a Reply