ಮಲ್ಪೆ ಬೋಟ್ ಪ್ರಕರಣ : ನಾಪತ್ತೆಯಾದ ಮೀನುಗಾರರು ಕ್ಷೇಮವಾಗಿ ಹಿಂತಿರುಗಲಿ ಎಂದು ಪಡುಬಿದ್ರಿ ಭಗವತಿ ಗ್ರೂಪಿನ ಸದಸ್ಯರಿಂದ ಪಡುಬಿದ್ರಿ ಬಾಲ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಹಾಗೂ ಪ್ರಾರ್ಥನೆ – Vishwanews24

Featured, ಉಡುಪಿ

ಪಡುಬಿದ್ರಿ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗಾಗಿ ಸಮುದ್ರಕ್ಕಿಳಿದ ಮೀನುಗಾರರು ನಾಪತ್ತೆಯಾಗಿ ತಿಂಗಳು ಕಳೆದರೂ ಸುಳಿವು ಲಭ್ಯವಾಗದೆ ಇರುವುದರಿಂದ ನಾಪತ್ತೆಯಾದವರು ಕ್ಷೇಮವಾಗಿ ಹಿಂತಿರುಗಲಿ ಎಂದು ಪಡುಬಿದ್ರಿ ಉದಯಾದ್ರಿ ಪ್ರಸನ್ನ ಪಾರ್ವತಿ ಬಾಲ ಗಣಪತಿ ದೇವಸ್ಥಾನದಲ್ಲಿ ಭಗವತಿ ಗ್ರೂಪಿನ ಪರವಾಗಿ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಗ್ರೂಪಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಪ್ರಾರ್ಥನೆ ಸಲ್ಲಿಸಿದರು..

ಮಲ್ಪೆ ಬಂದರಿನಿಂದ ಸುವರ್ಣ ತ್ರಿಭುಜ ಬೋಟ್‌ನಲ್ಲಿ ಆಳಸಮುದ್ರ ಟ್ರಾಲ್‌ ಬೋಟ್‌ ಮಾಲೀಕ ಚಂದ್ರಶೇಖರ್‌ ಕೋಟ್ಯಾನ್‌, ಮೀನುಗಾರರಾದ ದಾಮೋದರ್‌, ಲಕ್ಷ್ಮಣ, ಸತೀಶ್‌, ರವಿ, ಹರೀಶ್‌, ರಮೇಶ್‌ ಅವರು ಡಿ.13ರಂದು ರಾತ್ರಿ 11 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದರು.

ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರ ಕಣ್ಮರೆಯಾಗಿ ಒಂದು ತಿಂಗಳು ಪೂರ್ಣಗೊಂಡಿದೆ. ಆದರೆ ಈವರೆಗೂ ಮೀನುಗಾರರಿಗೆ ಸಂಬಂಧಿಸಿ ಯಾವುದೇ ಸುಳಿವು ಪತ್ತೆಯಾಗಿಲ್ಲ.