ಮಲ್ಪೆ: ಬೋಟ್ ಹತ್ತುವಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು – Vishwanews24

Featured, ಉಡುಪಿ

ಮಲ್ಪೆ: ಬೋಟ್ ಹತ್ತುವಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು

ಮಲ್ಪೆ : ಬೋಟ್ ಹತ್ತುವಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನ ಬಾಪು ತೋಟ ದಕ್ಕೆಯಲ್ಲಿ ನಡೆದಿದೆ.

ಮೃತರನ್ನು ಕಿದಿಯೂರು ನಿವಾಸಿ ಜಯಂತ್ ಆರ್.ಪಿ (33) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಉಡುಪಿ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಜುವೆಲ್ಯರಿ ಅಂಗಡಿ ಸಿಬ್ಬಂದಿ ಕೊಲೆ, ದರೋಡೆ ಪ್ರಕರಣ : ಆಟೋ ಚಾಲಕನ ವಿಚಾರಣೆ – Vishwanews24

ಈ ಬಗ್ಗೆ ಮಾತನಾಡಿರುವ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು, ಬಂದರಿನಲ್ಲಿ ತುಂಬಿರುವ ಹೂಳಿನಿಂದಾಗಿ ಇಂತಹ ಘಟನೆಗಳು ನಡೆಯುತ್ತಿದೆ. ಬಂದರಿನಲ್ಲಿರುವ ಹೂಳನ್ನು ಆದಷ್ಟು ಬೇಗ ತೆಗೆಯಬೇಕು ಇಲ್ಲವಾದಲ್ಲಿ ಇಲ್ಲಿ ಇನ್ನೇಷ್ಟು ಸಾವು ನೋವುಗಳು ಸಂಭವಿಸುತ್ತದೋ ಗೊತ್ತಿಲ್ಲ. ಆದ್ದರಿಂದ ಸಂಬಂಧ ಪಟ್ಟವರು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಉಡುಪಿ : ಪ್ಲಾಸ್ಟಿಕ್ ತ್ಯಾಜ್ಯದಿಂದ ನಿರ್ಮಿಸಿದ ರಸ್ತೆ : ಯಶಸ್ವಿಯಾದ ಪ್ರಯೋಗ – Vishwanews24

Leave a Reply