ಮಲ್ಪೆ : ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ – ಸಣ್ಣ ಉದ್ದಿಮೆದಾರರಿಗೆ ಮಾನ್ಸೂನ್ ಸಾಲ ಯೋಜನೆ – Vishwanews24
ಮಲ್ಪೆ : ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ – ಸಣ್ಣ ಉದ್ದಿಮೆದಾರರಿಗೆ ಮಾನ್ಸೂನ್ ಸಾಲ ಯೋಜನೆ
ಆಕರ್ಷಕ ಬಡ್ಡಿ
ಸಬ್ಸಿಡಿ ಮಾನ್ಯತೆ
ಮಾಜಿ ಸೈನಿಕರಿಗೆ ವಿಶೇಷ ಬಡ್ಡಿ
ಮಲ್ಪೆ : ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೋ ಬ್ಯಾಂಕ್ ಮಾನ್ಸೂನ್ ಸಾಲ ಯೋಜನೆಯನ್ನು ಆರಂಭಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ಯೋಜನೆಯಲ್ಲಿ ಹೂ ಮೀನುಗಾರರು, ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಕ್ಷೌರಿಕರು, ರಿಕ್ಷಾ ಚಾಲಕರು, ಗೂಡಂಗಡಿ ವ್ಯಾಪಾರಿಗಳು, ಟೈಲರ್‌ಗಳು ಮೊದಲಾದ ಸಣ್ಣ ಉದ್ದಿಮೆದಾರರು ಈ ಯೋಜನೆಯ ಮೂಲಕ ಸಾಲ ಪಡೆಯಲು ಅರ್ಹರಾಗಿದ್ದು, 50 ಸಾವಿರದಿಂದ 2 ಲಕ್ಷ ರೂ. ವರೆಗೆ ಶೇ. 8 ಬಡ್ಡಿದರದಲ್ಲಿ ಅರ್ಹ ಗ್ರಾಹಕರಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಲಾಗುವುದು.
ಆಕರ್ಷಕ ಬಡ್ಡಿ
ಮಹಾಲಕ್ಷ್ಮೀ ಉಳಿತಾಯ ಖಾತೆಗಳಿಗೆ ಆಕರ್ಷಕ ಬ್ಯಾಂಕ್ ಬಡ್ಡಿದರ ನೀಡುತ್ತಿದ್ದು, ಮಹಾಲಕ್ಷ್ಮೀ ಪ್ಲಾಟಿನಂ ಉಳಿತಾಯ ಖಾತೆಯಲ್ಲಿ ಕನಿಷ್ಠ ಠೇವಣಿಯಾಗಿ 5 ಲಕ್ಷ ರೂ. ಹೊಂದಿದಲ್ಲಿ ವೈಯಕ್ತಿಕ ಖಾತೆಗೆ 4.75 ಮಹಾಲಕ್ಷ್ಮೀ ಗೋಲ್ಡ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಠೇವಣಿಯಾಗಿ 2 ಲಕ್ಷ ರೂ. ಹೊಂದಿದಲ್ಲಿ ಶೇ. 4.25 ಹಾಗೂ ನೋಂದಾಯಿತ ಸಂಘ ಸಂಸ್ಥೆಗಳಿಗೆ ಹೆಚ್ಚುವರಿ ಶೇ. 0.5 ಬಡ್ಡಿ ನೀಡಲಾಗುವುದು.
ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋಭಾವನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ವಿದ್ಯಾಸಿರಿ, ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆಯ ಮೂಲಕ ಉಚಿತ ಎಟಿಎಂ ಕಾರ್ಡ್ ಒದಗಿಸಲಾಗುತ್ತಿದೆ.
ಸಬ್ಸಿಡಿ ಮಾನ್ಯತೆ
ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ಸರಿಸಮನಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಸಬ್ಸಿಡಿ ಪಡೆಯಲು ಮಹಾಲಕ್ಷ್ಮೀ ಬ್ಯಾಂಕ್ ಖಾತೆಗೆ ಸರಕಾರ ಮಾನ್ಯತೆಯನ್ನು ನೀಡಿದೆ. ಯೋಜನೆ ಹಾಗೂ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕಿನ ಶಾಖಾ ಪ್ರಬಂಧಕರನ್ನು ಸಂಪರ್ಕಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸೈನಿಕರಿಗೆ ವಿಶೇಷ ಬಡ್ಡಿ
ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ನಿವೃತ್ತ ಸೇನಾನಿಗಳನ್ನು ಗೌರವಿಸುವ ನಿಟ್ಟಿನಲ್ಲಿ ಆ. 31ರ ವರೆಗೆ ಮಾಜಿ ಸೈನಿಕರಿಗೆ ನಿರಖು ಠೇವಣಿಗಳ ಮೇಲೆ ಶೇ.1 ಅಧಿಕ ಬಡ್ಡಿ ನೀಡಲಿದೆ.
