ಮಲ್ಪೆ: ರೆಸಾರ್ಟ್ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ : ಪೊಲೀಸ್ ವಶಕ್ಕೆ – Vishwanews24
ಮಲ್ಪೆ: ರೆಸಾರ್ಟ್ನಲ್ಲಿ ಅನ್ಯಕೋಮಿನ ಜೋಡಿ ಪತ್ತೆ : ಪೊಲೀಸ್ ವಶಕ್ಕೆ – Vishwanews24
ಮಲ್ಪೆ: ಹಿಂದು ಯುವತಿ ಅನ್ಯಕೋಮಿನ ಯುವಕನೊಂದಿಗೆ ರೆಸಾರ್ಟ್ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ಪೋಷಕರನ್ನು ಠಾಣೆಗೆ ಕರೆಯಿಸಿ ಬುದ್ದಿವಾದ ಹೇಳಿದ ಘಟನೆ ಮಲ್ಪೆಯ ಬಡನಿಡಿಯೂರಿನಲ್ಲಿ ಇಂದು ನಡೆದಿದೆ.

ಅನ್ಯಕೋಮಿನ ಯುವ ಜೋಡಿಗಳು ಬಡನಿಡಿಯೂರಿನ ರೆಸಾರ್ಟ್ ನಲ್ಲಿ ಕೊಠಡಿಯನ್ನು ಬುಕ್ ಮಾಡಿದ್ದರು. ಈ ಬಗ್ಗೆ ಮಾಹಿತಿ ದೊರಕಿ ಹಿಂದು ಸಂಘಟನಾ ಕಾರ್ಯಕರ್ತರು ಸ್ಥಳಿಯ ಪೊಲೀಸರಿಗೆ ಮಾಹಿತಿರವಾನಿಸಿದ್ದರು. ಬಳಿಕ ಮಲ್ಪೆ ಪೊಲೀಸರು ಸ್ಥಳಕ್ಕಾಗಮಿಸಿ ಯಾವುದೇ ಮುಂದೆ ಯಾವುದೇ ಅಚಾತುರ್ಯ ನಡೆಯದಂತೆ ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಪೋಷಕರನ್ನು ಠಾಣೆಗೆ ಕರೆಯಿಸಿ ಅವರವರ ಮನೆಗೆ ಕಳುಹಿಸಲಾಗಿದೆ ಎಂದು ಮಲ್ಪೆ ಠಾಣಾ ಎಸೈ ಮಾಹಿತಿ ನೀಡಿದ್ದಾರೆ.
ಇಡೀ ದೇಶವನ್ನು ಕೇಸರಿಕರಣಗೊಳಿಸುವ ವ್ಯವಸ್ಥಿತ ಹುನ್ನಾರ : ದಿನೇಶ್ ಗುಂಡೂರಾವ್ ಕಿಡಿ – Vishwanews24
