ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ : ಕಾಳಿ ಸ್ವಾಮಿ – Vishwanews24
ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ : ಕಾಳಿ ಸ್ವಾಮಿ – Vishwanews24
ಬೆಂಗಳೂರು: ನಾನು ಕುವೆಂಪು ವಿರುದ್ಧ ಆಗಲಿ ಕೆಂಪೇಗೌಡರ ವಿರುದ್ಧ ಆಗಲಿ ಯಾವತ್ತೂ ಮಾತಾಡಿಲ್ಲ. ಒಂದು ವೇಳೆ ಮಾತಾಡಿದ್ದೇ ಆದರೆ ಸಾಬೀತುಪಡಿಸಲಿ ಎಂದು ಕಾಳಿ ಸ್ವಾಮಿ ಸವಾಲೆಸೆದಿದ್ದಾರೆ.
ಮುಖಕ್ಕೆ ಮಸಿ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಅನಾಮಧೇಯ ವ್ಯಕ್ತಿಗಳು ಸಂಘಟನೆ ಹೆಸರು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಸಿ ಬಳಿದಿದ್ದಾರೆ ಎಂದರು.
ನಾನು ಕುವೆಂಪು ವಿರುದ್ಧ ಆಗಲಿ ಕೆಂಪೇಗೌಡರ ವಿರುದ್ಧ ಆಗಲಿ ಯಾವತ್ತು ಮಾತಾಡಿಲ್ಲ. ಮಾತಾಡಿದ್ದೇನೆ ಅನ್ನೋದಾದ್ರೆ ಸಾಬೀತು ಪಡಿಸಲಿ. ಕ್ಷುಲ್ಲಕ್ಕ ಕಾರಣಕ್ಕೆ ಬೇಕಂತಲೆ ಗಲಾಟೆ ಮಾಡಿದ್ದ ಹಾಗೇ ಕಾಣಿಸ್ತಾ ಇದೆ. ಹಾಗಾಗಿ ಮಸಿ ಬಳಿದವರ ವಿರುದ್ಧ ಕಾಳಿಕಾ ಸೇನೆ ಕಾರ್ಯದರ್ಶಿ ದೂರು ನೀಡಲಿದ್ದಾರೆ ಎಂದು ತಿಳಿಸಿದರು.
ಕಾಳಿಮಠದ ಋಷಿಕೇಷ ಸ್ವಾಮೀಜಿ ಮುಖಕ್ಕೆ ಕಪ್ಪು ಮಸಿ ಬಳಿದ ಕನ್ನಡಪರ ಹೋರಾಟಗಾರರು – Vishwanews24
