ಮಸೀದಿಯಲ್ಲಿ ನಮಾಜ್ ಮಾಡಲು ಜಾಗವಿಲ್ಲದಾಗ ತಮ್ಮ ಅಂಗಡಿ ಎದುರು ಪ್ರಾರ್ಥನೆ ಸಲ್ಲಿಸಲು ಜಾಗ ಮಾಡಿಕೊಟ್ಟ ಹಿಂದೂಗಳು -Vishwanews24
ಭೊಪಾಲ್: ಮಸೀದಿಯಲ್ಲಿ ನಮಾಜ್ ಮಾಡಲು ಜಾಗವಿಲ್ಲದಾಗ ಹಿಂದೂಗಳು ತಮ್ಮ ವ್ಯಾಪಾರವನ್ನು ನಿಲ್ಲಿಸಿ ತಮ್ಮ ಅಂಗಡಿ ಎದುರು ಪ್ರಾರ್ಥನೆ ಸಲ್ಲಿಸಲು ಜಾಗ ಮಾಡಿಕೊಟ್ಟು ಕೋಮು ಸೌಹರ್ದತೆ ಮೀರಿದ ಘಟನೆ ಶುಕ್ರವಾರ ಚೌಕ ಬಜಾರ್ ನಲ್ಲಿ ನಡೆದಿದೆ.
ಶುಕ್ರವಾರ ಜುಮಾ ಮಸೀದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆಗಾಗಿ ಸೇರಿದ್ದಾರೆ. ಒಳಗಡೆ ಜಾಗವಿಲ್ಲದೆ ನೂರಾರು ಮಂದಿ ಮಸೀದಿ ಹೊರಗಡೆ ನಿಂತಿದ್ದಾರೆ.
ಈ ವೇಳೆ ಮಸೀದಿ ಎದುರು ಅಂಗಡಿ ನಡೆಸುತ್ತಿದ್ದ ಹಿಂದೂಗಳು ತಮ್ಮ ಅಂಗಡಿಯ ಎದುರು ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ್ದಾರೆ.
ಜವಳಿ ಮಾಲೀಕ ವಿಕಾಸ್ ಅಗಾರವಾಲ್ ಮಾತನಾಡಿ, ಈ ತಿಂಗಳು ಮುಸ್ಲಿಮರಿಗೆ ಪವಿತ್ರವಾದ ತಿಂಗಳು. ಈ ಸಂದರ್ಭದಲ್ಲಿ ಅವರಿಗೆ ಮಸೀದಿಯಲ್ಲಿ ಜಾಗವಿಲ್ಲದಾಗ ನಮ್ಮ ವ್ಯಾಪಾರವನ್ನು ಮುಚ್ಚಿ ಅವರಿಗೆ ಸ್ಥಳಾವಕಾಶ ಮಾಡಿಕೊಡಲಾಯಿತು ಎಂದರು.
ಆಭರಣ ಮಾಲೀಕ ಅಲೋಕ್ ಮಿಠಲ್ ಮಾತನಾಡಿ, ಕಠಿಣ ಉಪವಾಸ ವೃತದಲ್ಲಿರುವ ಮುಸ್ಲಿಂ ಬಾಂಧವರಿಗೆ ನಾವು ಇಷ್ಟು ಮಾತ್ರ ಮಾಡಲು ಸಾಧ್ಯ ಎಂದರು.
