ಮಹಿಳಾ ಯೋಧರ ನೇಮಕಾತಿ : ಆನ್‌ಲೈನ್ ಮೂಲಕ 100 ಹುದ್ದೆಗೆ 2 ಲಕ್ಷ ಮಹಿಳೆಯರ ಅರ್ಜಿ ಸಲ್ಲಿಕೆ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ, : ಸೇನೆಗೆ ಸೇರಲು ಮಹಿಳೆಯರ ಆಸಕ್ತಿ ಹೆಚ್ಚಾಗಿದೆ.  100 ಖಾಲಿ ಹುದ್ದೆಗಳಿಗೆ 2 ಲಕ್ಷ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ

ಯುದ್ಧ ವಿಮಾನ ಚಾಲನೆ ಮಾಡಲು ಆರು ಮಹಿಳಾ ಪೈಲಟ್‌ಗಳು ಇದೀಗ ತರಬೇತಿ ಪಡೆಯುತ್ತಿದ್ದು, ಇದೀಗ 15 ಲಕ್ಷ ಬಲದ ಪ್ರಬಲ ಸಶಸ್ತ್ರ ಪಡೆ ಹೊಸ ದಾಖಲೆ ಬರೆದಿದೆ. ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ (ಸಿಎಂಪಿ) ಪಡೆಯ 100 ಖಾಲಿ ಹುದ್ದೆಗಳಿಗೆ 2 ಲಕ್ಷ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಸೇನೆ ಇದೇ ಮೊದಲ ಬಾರಿಗೆ ಪ್ರಾಂತೀಯ ಸೇನೆಯಲ್ಲಿ ಮಹಿಳಾ ಪ್ರೊವೊಸ್ಟ್ ಯುನಿಟ್ ಆರಂಭಿಸಲು ಮುಂದಾಗಿದೆ. ಇಬ್ಬರು ಅಧಿಕಾರಿಗಳು ಮೂವರು ಕಿರಿಯ ನಿಯುಕ್ತ ಅಧಿಕಾರಿಗಳು ಹಾಗೂ 40 ಸೈನಿಕರು ಈ ಘಟಕದಲ್ಲಿರುತ್ತಾರೆ.

“ಮಹಿಳಾ ಯೋಧರ (ಸಾಮಾನ್ಯ ಕರ್ತವ್ಯ) ನೇಮಕ ನಿರ್ಧಾರ ಅತ್ಯಂತ ಮಹತ್ವದ್ದು.  ಎರಡು ಲಕ್ಷ ಮಹಿಳೆಯರು ಇದುವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ನೇಮಕಾತಿ ರ್ಯಾಲಿ ಈ ತಿಂಗಳ ಅಂತ್ಯಕ್ಕೆ ಬೆಳಗಾವಿಯಲ್ಲಿ ನಡೆಯಲಿದೆ” ಎಂದು ಸೇನೆಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಿಂತ ಕೆಳಗಿನ ಹುದ್ದೆಯಾದ ಪಿಬಿಒಆರ್ ಹುದ್ದೆಗಳಿಗೆ ಮುಂದಿನ 17 ವರ್ಷಗಳಲ್ಲಿ ಹಂತಹಂತವಾಗಿ 1,700 ಮಹಿಳೆಯರನ್ನು ನೇಮಿಸಿಕೊಳ್ಳಲು ಸೇನೆ ಉದ್ದೇಶಿಸಿದೆ.

ತರಬೇತಿಯ ನಂತರ, ಮಹಿಳಾ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾಗದಲ್ಲಿ ಇರಿಸಲಾಗುವುದು. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಮಹಿಳಾ ಪ್ರದರ್ಶನಕಾರರನ್ನು ತಡೆಯುವುದು  ಮುಖ್ಯ ಕೆಲಸವಾಗಲಿದೆ.