ಮಹಿಳೆಗೆ ಪರಿಹಾರವಾಗಿ ಹಣ ನೀಡಿದಲ್ಲ. ಮಾನವೀಯ ದೃಷ್ಠಿಯಿಂದ ನೀಡಿದ ಹಣ : ಸಿದ್ದರಾಮಯ್ಯ – Vishwanews24

Featured, ರಾಜ್ಯ ನ್ಯೂಸ್

ಮಹಿಳೆಗೆ ಪರಿಹಾರವಾಗಿ ಹಣ ನೀಡಿದಲ್ಲ. ಮಾನವೀಯ ದೃಷ್ಠಿಯಿಂದ ನೀಡಿದ ಹಣ : ಸಿದ್ದು ಸ್ಪಷ್ಟನೆ 

ಬೆಂಗಳೂರು: ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದಿದ್ದ ಗುಂಪು ಘರ್ಷಣೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಣೆ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಹಿಳೊಬ್ಬರು ಸಿಟ್ಟಿಗೆದ್ದು ಹಣ ವಾಪಾಸ್ ಎಸೆದಿರುವ ಘಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬಾದಾಮಿಯ ಕೆರೂರು ಗುಂಪು ಘರ್ಷಣೆ ವೇಳೆ ಕೆಲ ಜನರಿಗೆ ಗಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಸಾಂತ್ವನ ಹೇಳಿ ಪರಿಹಾರ ನೀಡುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಮಹಿಳೆಯೊಬ್ಬರಿಗೆ 2 ಲಕ್ಷ ನೀಡಿ ಸಂದರ್ಭದಲ್ಲಿ ನನಗೆ ಹಣಬೇಡ ನನಗೆ ಶಾಂತಿ, ನಮಗೆ ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ ಅವರು ನೀಡಿದ ಹಣವನ್ನು ಏಕಾಏಕಿ ಕಾರಿನ ಮೇಲೆ ಎಸೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆ ಮಹಿಳೆಯನ್ನು ಯಾರೋ ಎತ್ತಿ ಕಟ್ಟಿದ್ದಾರೆ ದುಡ್ಡು ಬಿಸಾಡಿದ ಮಹಿಳೆಗೆ ಮತ್ತೆ ಹಣ ಕೊಡಲಾಗಿದೆ. ನಾನು ಘಟನೆಗೆ ಪರಿಹಾರವಾಗಿ ಹಣ ನೀಡಿದಲ್ಲ. ಮಾನವೀಯ ದೃಷ್ಠಿಯಿಂದ ನೀಡಿದ ಹಣ ಎಂದು ಸ್ಪಷ್ಟನೆ ನೀಡಿದ್ದಾರೆ.

RMD ಹೆಸರಿನ ನಕಲಿ ಪಾನ್ ಮಸಲಾ ತಯಾರಿಸಿ ದೇಶಾದ್ಯಂತ ಮಾರಾಟ ; ಐವರ ಬಂಧನ – Vishwanews24

Leave a Reply