ಮಹಿಳೆಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಜೊಮ್ಯಾಟೊ ಡೆಲಿವರಿ ಬಾಯ್ -Vishwanews24
ಆಕೆಯೇ ನನ್ನ ಮೇಲೆ ಚಪ್ಪಲೆಸದರು, ಉಂಗುರದಿಂದ ತಾನೇ ಹೊಡೆದುಕೊಂಡರು..
ಮಹಿಳೆಯ ಆರೋಪಕ್ಕೆ ಸ್ಪಷ್ಟನೆ ನೀಡಿದ ಜೊಮ್ಯಾಟೊ ಡೆಲಿವರಿ ಬಾಯ್ -Vishwanews24
ಬೆಂಗಳೂರು: ಕಳೆದ ಮಂಗಳವಾರದ ಮಧ್ಯಾಹ್ನದಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಜೊಮ್ಯಾಟೋ ಡಿಲಿವರಿ ಬಾಯ್ ಯುವತಿಯೊಬ್ಬಳಿಗೆ ಮೂಗು ಮುರಿಯುವಂತೆ ಗುದ್ದಿದ್ದಾಗಿ, ಆ ಯುವತಿಯೇ ಸೋಷಿಯನ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಳು ಆಕೆಯ ಮೂಗು ಮುರಿದ ಜೊಮ್ಯಾಟೊ ಡೆಲಿವರಿ ಬಾಯ್‌ನನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬಂಧಿಸಿದ್ದಾರೆ. ಆದರೆ ದಿನ ಕಳೆದಂತೆ ಇದೀಗ ಹೊಸ ಆಯಾಮವೊಂದು ಈ ಕೇಸ್‌ಗೆ ಸಿಕ್ಕಿದೆ.
ಯುವತಿಯೇ ರಂಪಾಟ ಮಾಡಿಕೊಂಡು ಇಷ್ಟೆಲ್ಲ ಅವಾಂತರ ಮಾಡಿರುವುದಾಗಿ ಜೊಮ್ಯಾಟೊ ಡೆಲಿವರಿ ಬಾಯ್ ಹೇಳಿಕೊಂಡಿದ್ದಾರೆ. ಈತನ ಹೇಳಿಕೆ ಬೆನ್ನಲ್ಲೇ ಅನೇಕರು ಜೊಮ್ಯಾಟೊ ಡೆಲಿವರಿ ಬಾಯ್‌ನ ಬೆಂಬಲಕ್ಕೆ ನಿಂತಿದ್ದಾರೆ. ಜೊಮ್ಯಾಟೊ ಡೆಲಿವರಿ ಬಾಯ್ ಪರವಾಗಿ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಕೂಡ ಶುರುವಾಗಿದೆ.
ಜೊಮ್ಯಾಟೊ ಡೆಲಿವರಿ ಬಾಯ್ ಕಾಮ್‌ರಾಜ್ ಹೇಳುವುದೇನು?
ನಾನು ಯುವತಿ ಮನೆಯ ಬಾಗಿಲನ್ನು ತಲುಪಿದ ನಂತರ, ಆಕೆಗೆ ಅವರು ಆರ್ಡರ್ ಮಾಡಿದ ಆಹಾರವನ್ನು ಹಸ್ತಾಂತರಿಸಿದೆ. ಆಹಾರದ ಹಣ ಪಾವತಿಸುತ್ತಾರೆಂದುಕೊಂಡು ಮನೆ ಬಾಗಿಲಿನಲ್ಲಿ ಕಾಯುತ್ತಿದೆ. ಆಗ ನೀನು ಏಕೆ ಆಹಾರ ತರಲು ತಡ ಮಾಡಿದ್ದಿ ಎಂದು ಅವರು ಕೊಂಚ ಜೋರಾಗೆ ಕೇಳಿದರು.
ಇದಕ್ಕೆ ನಾನು ಟ್ರಾಫಿಕ್ ಜಾಮ್ ಹಾಗೂ ಕಾಮಗಾರಿ ನಡೆಯುತ್ತಿರುವುದರಿಂದ ತಡವಾಯಿತು ಎಂದು ವಿನಮ್ರದಿಂದ ಕ್ಷಮೆಯಾಚಿಸಿ ಕೇಳಿದೆ. ಆದರೆ ಮತ್ತೆ ಯುವತಿ 40-45 ನಿಮಿಷವೆಂದು ಹೇಳಿ ಇಷ್ಟು ಸಮಯ ತೆಗೆದುಕೊಂಡರೆ ಹೇಗೆ ಎಂದು ಮತ್ತೆ ದಬಾಯಿಸಿದರು ಎಂದು ವಿವರಿಸಿದ ಕಾಮರಾಜ್, ಸುಮಾರು ಎರಡು ವರ್ಷಗಳಿಂದ ನಾನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿಯ ಸನ್ನಿವೇಶ ಸಂಭವಿಸಿದೆ ಎಂದು ತನ್ನ ನೋವು ತೋಡಿಕೊಂಡರು.
ಕೊರೋನಾ 2ನೇ ಅಲೆ ಭೀತಿ : ಬೆಂಗಳೂರಿನಲ್ಲಿ ಮಾರ್ಚ್ 31ರವರೆಗೆ ನೈಟ್ ಪಾರ್ಟಿ ಬ್ಯಾನ್ -Vishwanews24
“ನಾನು ಹಣ ನೀಡುವಂತೆ ಯುವತಿ ಬಳಿ ಮನವಿ ಮಾಡಿದದೆ. ಆದರೆ ಯುವತಿ ಹಣ ಕೊಡುವುದಿಲ್ಲ ಬದಲಾಗಿ ಜೊಮ್ಯಾಟೊ ಕಸ್ಟಮರ್ ಸಪೋರ್ಟರ್ ಹತ್ತಿರ ಮಾತನಾಡುತ್ತೇನೆ ಎಂದಿದ್ದಾಳೆ. ನಂತರ ಕಸ್ಟಮರ್ ಕೇರ್‌ಗೆ ಕರೆ ಕನೆಕ್ಟ್ ಆಗಿದೆ. ಆತ ಫುಡ್ ಹಿಂದಿರುಗಿಸುವಂತೆ ಯುವತಿಗೆ ಹೇಳಿದ್ದಾರೆ. ಹೀಗಾಗಿ ನಾನು ಮತ್ತೆ ಮೇಡಂ ಫುಡ್ ವಾಪಸ್ ಕೊಡಿ ಎಂದು ಕೇಳಿದೆ. ಆದರೆ ಮಹಿಳೆ ಆಹಾರ ವಾಪಸ್ ನೀಡಲು ಹಿಂದೇಟು ಹಾಕಿದ್ದಾರೆ.
ಅಲ್ಲದೇ ನನಗೆ ಬೈಯಲು ಆರಂಭಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಆಹಾರದ ಪೊಟ್ಟಣ ಅಲ್ಲೇ ಬಿಟ್ಟು ವಾಪಸ್ ಹೋಗಲು ನಾನು ಮುಂದಾದೆ. ಈ ವೇಳೆ ಯುವತಿ ಆಕೆಯ ಚಪ್ಪಲನ್ನು ನನ್ನ ಮೇಲೆ ಎಸೆದಳು. ಹಿಂದಿಯಲ್ಲಿ ಅವಾಚ್ಯವಾಗಿ ಬೈದಳು. ನಂತರ ನನಗೆ ಹೊಡೆದಳು. ಹೀಗೆ ಆಕೆ ತನ್ನ ಕೈನಿಂದ ಹೊಡೆಯುವಾಗು ನಾನು ಅದರಿಂದ ತಪ್ಪಿಸಿಕೊಳ್ಳಲು ಮುಂದಾದೆ.
ಈ ವೇಳೆ ಆಕೆ ಹೊಡೆಯುವ ರಭಸದಲ್ಲಿ ಆಕೆಯ ಕೈಯಲ್ಲಿದ್ದ ಉಂಗುರದಿಂದ ಆಕೆಯ ತನ್ನ ಮೂಗಿಗೆ ಹೊಡೆದುಕೊಂಡಿದ್ದಾಳೆ ಎಂದು ಕಾಮ್‌ರಾಜ್ ಸ್ಪಷ್ಟನೆ ನೀಡಿದ್ದಾರೆ. ಪೆಟ್ಟು ಬಿದ್ದ ತಕ್ಷಣ ಮೂಗಿನಿಂದ ರಕ್ತ ಬರಲು ಆರಂಭವಾಯ್ತು, ನಾನು ಅಲ್ಲಿಂದ ಭಯದಲ್ಲಿ ಓಡಿ ಹೋದೆ. ನಂತರ ಜೊಮ್ಯಾಟೋ ಕಸ್ಟಮರ್ ಸಪೋರ್ಟರ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಕಾಮ್‌ರಾಜ್ ಅಳಲು ತೋಡಿಕೊಂಡಿದ್ದಾರೆ.ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
