ಮಹಿಳೆಯರ ಅಂದ ಹೆಚ್ಚಿಸುವ ಮೂಗುತಿ ಮಹತ್ವ ನಿಮಗೆ ಗೊತ್ತೇ?……Vishwanews24

Featured, ರಾಜ್ಯ ನ್ಯೂಸ್, ವಿಶೇಷ ಲೇಖನಗಳು

ಮೂಗುತಿಯು ಮೂಗಿನ ಮೇಲೆ ಧರಿಸುವ ಆಭರಣವಾಗಿದ್ದು, ಇದು ಹೆಣ್ಣಿನ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ. ಮಹಿಳೆಯರ ಅಂದ ಹೆಚ್ಚಿರುವ ಮೂಗುತಿ ಮಹತ್ವ ನಿಮಗೆ ಗೊತ್ತೇ?…

ಹೆಣ್ಣಿನ ಅಂದಕ್ಕೆ ಮೂಗುತಿಯೇ ಶೃಂಗಾರ ಹೆಣ್ಣಿನ ಅಂದವನ್ನು ಹೆಚ್ಚಿಸಲು ಅವಳು ಧರಿಸುವ ಕುಂಕುಮ. ಮೂಗುತಿ. ಒಲೆ. ಸರಗಳೇ ಸಾಕು ಇವು ಅವಳ ಅಂದವನ್ನು ಹೆಚ್ಚಿಸುವ ಜೊತೆಗೆ ಅವಳ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯನ್ನು ಗಾತ್ರವೇ ದೊಡ್ಡದಾಗಿತ್ತು ಅಷ್ಟು ದೊಡ್ಡ ಮೂಗುತಿಯನ್ನು ಧರಿಸುತ್ತಿದ್ದರು ಜೊತೆಗೆ ಹೆಣ್ಣು ಮಕ್ಕಳು ಜನಿಸಿದರೆ ಸಾಕು ಅವರು ಸ್ವಲ್ಪ ದೊಡ್ಡವರು ಅಂದರೆ ಸುಮಾರು ಒಂಬತ್ತು ತಿಂಗಳು ಅದ ತಕ್ಷಣ ಒಲೆ ಚುಚ್ಚಿಸುವ ಜೊತೆಗೆ ಮೂಗುತಿಯನ್ನು ಕೂಡ ಧರಿಸುತ್ತಿದ್ದರು.

ಆದರೆ ಕಾಲ ಬದಲಾದಂತೆ ಇಂದು ಮಹಿಳೆಯರಿಗೆ ಮೂಗುತಿಯನ್ನು ಹಾಕಿಸುವುದು ಎಂದರೆ ಅವರ ಮನೆಯಲ್ಲಿ ಹರಸಾಹಸ ಮಾಡುತ್ತಾರೆ ಅದರಲ್ಲೂ ಅವರ ಮನೆಯಲ್ಲಿ ಅಜ್ಜಿಯರು ಇದ್ದರೆ ಅವರ ಬಲವಂತಕ್ಕಾಗಿ ಮೂಗುತಿ ಚುಚ್ಚಿಸಿಕೊಳ್ಳುತ್ತಾರೆ ಇಲ್ಲವಾದರೆ ಮದುವೆ ಸಂದರ್ಭದಲ್ಲಿ ಅಂದವಾಗಿ ಕಾಣಬೇಕು ಎಂಬ ಉದ್ದೇಶಕ್ಕೆ ತಾತ್ಕಾಲಿಕವಾಗಿ ಮೂಗುತಿ ಹಾಕಿಕೊಂಡು ಮದುವೆ ಮುಗಿದ ತಕ್ಷಣ ತೆಗೆದು ಬಿಡುತ್ತಾರೆ. ಆದರೆ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ಎಂದು ತಿಳಿದುಕೊಂಡರೆ ತಪ್ಪದೆ ಎಲ್ಲರೂ ಮೂಗುತಿ ಧರಿಸುತ್ತಿರ.

ಮೂಗುತಿಯನ್ನು ಧರಿಸುವುದರಿಂದ ಹೆಣ್ಣು ಮಕ್ಕಳು ಅಂದವಾಗಿ ಲಕ್ಷಣವಾಗಿ ಕಾಣಿಸುತ್ತಾರೆ. ಮೂಗುತಿ ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಹೆಚ್ಚು ಒತ್ತಡವು ನಿರ್ಮಾಣವಾಗುತ್ತದೆ ಅದುದ್ದರಿಂದ ಅಲ್ಲಿ ಆಕ್ಯುಪ್ರೆಶರ್ ಉಂಟಾಗಿ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ. ಯಾವುದೇ ರೀತಿಯ ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಲ್ಲಿ ಹಲ್ಲೆಯಾಗದಂತೆ ಮೂಗುತಿಯು ನಮ್ಮ ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ.

ಮೂಗಿನ ಸುತ್ತಲು ಇರುವ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶ ಮಾಡುತ್ತದೆ. ಇದರ ಜೊತೆಗೆ ಇನ್ನೊಂದು ಮುಖ್ಯವಾದ ವಿಷಯ ಇದೆ ಅದು ಏನೆಂದರೆ ಮೂಗುತಿಯನ್ನು ಕೇವಲ ಮಹಿಳೆಯರು ಮಾತ್ರ ಧರಿಸಬೇಕು ಎಂದು ನಮ್ಮ ಶಾಸ್ತ್ರ ಹೇಳುತ್ತದೆ ಅಲ್ಲವೇ ಇದು ಏಕೆ ಎಂದು ನೋಡುವುದಾದರೆ ಸ್ತ್ರೀಯರ ಮನಸ್ಸು ತುಂಬಾ ಬೇಗ ಹಾಗೂ ಹೆಚ್ಚಾಗಿ ಚಂಚಲತೆ ಒಳಗಾಗುತ್ತದೆ ಅದುದ್ದರಿಂದ ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಮಹಿಳೆಯರು ಮಾತ್ರ ಮೂಗುತಿ ಧರಿಸಲು ಹೇಳಿದ್ದಾರೆ.

ಮಹಿಳೆಯರು ಮೂಗುತಿಯನ್ನು ಧರಿಸುವುದರಿಂದ ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳು ಕಡಿಮೆಯಾಗುತ್ತದೆ ಇದೆ ಕಾರಣಕ್ಕಾಗಿ ಹುಡುಗಿಯರು ಋತುಮತಿಯರಾಗುತ್ತಿದ್ದಂತೆ ಅವರಿಗೆ ಮೂಗುತಿ ಚುಚ್ಚಿಸುತ್ತಾರೆ. ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ ಇದರ ಕಾರಣ ಏನು ಗೊತ್ತೇ. ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ ಇದೆ ಕಾರಣದಿಂದಾಗಿ ಮೂಗುತಿಯನ್ನು ಎಡ ಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆಯ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದವನ್ನು ಹೆಚ್ಚಿಸುವ ಜೊತೆಗೆ ಅವರ ಆರೋಗ್ಯವನ್ನು ಕೂಡ ಹತೋಟಿಯಲ್ಲಿ ಇಡುತ್ತದೆ ಹಾಗಾಗಿ ಮೂಗುತಿ ಧರಿಸಲು ಮೂಗು ಮುರಿಯುವ ಎಲ್ಲ ಮಹಿಳೆಯರು ತಪ್ಪದೆ ಮೂಗುತಿ ಧರಿಸಿ.

 

ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವವನ್ನು ಕೊಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ, ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

ಕುದುರೆಗೆ ಮೂಗಿಗೆ ದಾರ ಹಾಕಿ ನಿಯಂತ್ರಿಸುವುದನ್ನು ನೋಡಿರಬಹುದು. ಅದೇ ರೀತಿಯಲ್ಲಿಯೇ ಮೂಗುತ್ತಿ ಕೂಡ ಹೆಣ್ಣಿನ ಕೋಪ, ಹಠ, ಚಂಚಲತೆಯನ್ನು ನಿಗ್ರಹಿಸುತ್ತದೆ. ಮೂಗುತ್ತಿಯಲ್ಲಿಯೂ ವಿವಿಧ ಪ್ರಕಾರದ ಮೂಗುತಿಗಳಿವೆ.

ಮದುವೆ ಸಮಾರಂಭಗಳಲ್ಲಿ ದೊಡ್ಡದಾದ ವೃತ್ತಾಕಾರದ ಮೂಗುತಿಯನ್ನು ವಧುವಿಗೆ ಧರಿಸಲಾಗುತ್ತದೆ. ಇದು ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತೀಯ ಹೆಂಗಳೆಯರು ಅವರವರ ಆಚರಣೆಗಳಿಗೆ ತಕ್ಕಂತೆ ಅವರವರ ಇಚ್ಛೆಯ ಪ್ರಕಾರವಾಗಿ ಮೂಗುತ್ತಿಯನ್ನು ಧರಿಸುತ್ತಾರೆ.

ಹಿಂದಿ ಭಾಷೆಯಲ್ಲಿ ನಾಥ್ ಎಂದು ಕರೆಯಲ್ಪಡುವ ಮೂಗುತಿ 9 ಮತ್ತು 10ನೇ ಶತಮಾನದಲ್ಲಿ ಜನಪ್ರಿಯಗೊಂಡಿತ್ತು. ಮತ್ತು ಮಹಿಳೆಯರ ವೈವಾಹಿಕ ಸ್ಥಿತಿಯ ವಿವಿಧ ಸಂಕೇತಗಳ ಭಾಗವಾದವು. ಇದು ಆರ್ಥಿಕ ಸ್ಥಾನಮಾನವನ್ನೂ ಪ್ರದರ್ಶಿಸುತ್ತಿತ್ತು. ರಾಣಿಯರು, ಮಂತ್ರಿಗಳ ಪತ್ನಿಯರು ಮತ್ತು ಶ್ರೀಮಂತ ಕುಟುಂಬದ ಮಹಿಳೆಯರು ಮುತ್ತು, ನೀಲಮಣಿ ಮತ್ತು ಕುಂದನ್ ವುಳ್ಳ ಮೂಗುತ್ತಿಗಳನ್ನು ಧರಿಸುತ್ತಿದ್ದರು. ಇತರರು ಬೆಳ್ಳಿಯ ಮೂಗುತ್ತಿಗಳನ್ನು ಧರಿಸುತ್ತಿದ್ದರು. 15ನೇ ಶತಮಾನದ ಕಡೆಗೆ ಈ ಮೂಗುತು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದು. 17-18ನೇ ಶತಮಾನದ ಅವಧಿಯಲ್ಲಿ ಲವಂಗ, ಮುಳ್ಳುಗಳು, ಮೊಳೆಗಳನ್ನು ಬಳಸುವ ವ್ಯತ್ಯಯನಗಳನ್ನು ಕಂಡಿತು. ಇದಾದ ಬಳಿಕ ಸಮಕಾಲೀನ ಸಾಮಾಗ್ರಿಗಳು ಮತ್ತು ವಿನ್ಯಾಸಗಳಿರುವ ಆಧುನಿಕ ಮೂಗುತಿಗಳು 20ನೇ ಶತಮಾನದಲ್ಲಿ ಬಂದವು.

ಮೂಗಿಗೆ ಧರಿಸುವ ಈ ವಿಶೇಷ ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ.

ಇದಲ್ಲದೆ, ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿಯೇ ಯುವತಿಯರು ಋತುಮತಿಯಾದ ಬಳಿಕ ಅವರಿಗೆ ಮೂಗು ಚುಚ್ಚಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂಗುತಿ ಎಂದಾಕ್ಷಣ ಮೂಗು ಮುರಿಯುವ ಮಹಿಳೆಯರು ಈಗಲೇ ಮೂಗುತಿ ಧರಿಸಿ.