ಮಹಿಳೆಯರ ಅಭಿವೃದ್ಧಿ ಕುರಿತು ನಮ್ಮ ಜೀವನವನ್ನು ಸಮರ್ಪಿಸಿದರೆ ಅದೇ ಸುಷ್ಮಾ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ : ಸ್ಮೃತಿ ಇರಾನಿ -Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ (67) ಅಗಲುವಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕ ಟ್ವೀಟ್ ಮಾಡಿದ್ದಾರೆ. 

ನೀವು ನನಗೊಂದು ವಚನ ನೀಡಿದ್ದೀರಿ ಆದರೆ ಅದನ್ನು ಪೂರ್ಣಗೊಳಿಸಲೇ ಇಲ್ಲ ಎಂದು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅಗಲುವಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ನೀವು ನನಗೊಂದು ವಚನ ನೀಡಿದ್ದಿರಿ ಆದರೆ ಅದನ್ನು ಪೂರ್ಣಗೊಳಿಸಲೇ ಇಲ್ಲ. ಅಲ್ಲೊಂದು ರೆಸ್ಟೋರೆಂಟ್ ಇದೆ. ಅಲ್ಲಿ ಸೆಲೆಬ್ರಿಟಿ ಲಂಚ್‌ಗೆ ನನ್ನನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಿರಿ. ಆದರೆ ನೀವು ನೀಡಿದ್ದ ವಾಗ್ದಾನವನ್ನು ಪೂರ್ತಿ ಮಾಡಲೇ ಇಲ್ಲ ಎಂದು ಸ್ಮೃತಿ ಇರಾನಿ ಭಾವುಕರಾಗಿ ಮಾತನಾಡಿದ್ದಾರೆ.

ಅಕ್ಕಾ ಲಕ್ಷಾಂತರ ಮಹಿಳೆಯರಿಗೆ ಪ್ರೇರಣೆಯಾಗಿದ್ದಿರಿ, ನಿಮ್ಮ ಅಕಾಲಿಕ ನಿಧನ ನಮ್ಮಲ್ಲೆರಿಗೂ ದಿಗ್ಭ್ರಮೆ ಉಂಟು ಮಾಡಿದೆ. ಒಬ್ಬ ಸಕ್ರಿಯ ಕಾರ್ಯಕರ್ತರಾಗಿ ಮಹಿಳೆಯರ ಅಭಿವೃದ್ಧಿ ಕುರಿತು ನಮ್ಮ ಜೀವನವನ್ನು ಸಮರ್ಪಿಸಿದರೆ ಅದೇ ಸುಷ್ಮಾ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದು ಟ್ವೀಟ್ ಮಾಡಿದ್ದಾರೆ.