ಮಹಿಳೆಯರನ್ನು ಮೊದಲು ಮಸೀದಿಯೊಳಗೆ ಬಿಡಲಿ ; ನಂತರ ದೇವಸ್ಥಾನದ ಬಗ್ಗೆ ಮಾತನಾಡಲಿ : ಪ್ರಮೋದ್ ಮುತಾಲಿಕ್

Featured, ರಾಜ್ಯ ನ್ಯೂಸ್

ಬೆಂಗಳೂರು: ‘ಕೇರಳ ಸರ್ಕಾರ ನಾಸ್ತಿಕವಾಗಿದ್ದು, ಶಬರಿಮಲೆ ದೇವಸ್ಥಾನವನ್ನು ಅಪವಿತ್ರ ಮಾಡುವ ಸಂಚು ರೂಪಿಸಿದೆ. ಮೊದಲು ಮಸೀದಿಯೊಳಗೆ ಮಹಿಳೆಯರನ್ನು ಬಿಡಲಿ, ಆನಂತರ ದೇವಸ್ಥಾನದ ಬಗ್ಗೆ ಮಾತನಾಡಲಿ’ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ಕಿಡಿ ಕಾರಿದರು.

‘ಕಮ್ಯುನಿಸ್ಟರು ಹಾಗೂ ಬುದ್ಧಿಜೀವಿಗಳು ಹಿಂದೂಗಳ ಮಠ ಹಾಗೂ ದೇವಸ್ಥಾನವನ್ನು ಅವಹೇಳನ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ಹಿಂದೂ ಸಂಪ್ರದಾಯ ಮುರಿಯಲು ಸಾಧ್ಯವಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಿಸ್‍ ಆಫ್‍ ಲವ್ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡವಳು ಪೊಲೀಸ್ ಉಡುಗೆಯಲ್ಲಿ ದೇವಸ್ಥಾನ ಪ್ರವೇಶಿಸಿದ್ದೇಕೆ? ಇದರಲ್ಲಿ ಸರ್ಕಾರದ ಕೈವಾಡ ಎದ್ದು ಕಾಣುತ್ತದೆ. ಕೇಂದ್ರ ಸರ್ಕಾರ, ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.