ಮಹಿಳೆಯರಿಗೆ ಸಿಹಿಸುದ್ದಿ : ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ `ಸಖಿ’ ಒನ್ ಸ್ಟಾಪ್ ಸೆಂಟರ್ ಆರಂಭ – Vishwanews24

Featured, ರಾಜ್ಯ ನ್ಯೂಸ್

ಮಹಿಳೆಯರಿಗೆ ಸಿಹಿಸುದ್ದಿ : ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ `ಸಖಿ’ ಒನ್ ಸ್ಟಾಪ್ ಸೆಂಟರ್ ಆರಂಭ

ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಸಮಸ್ಯೆಗಳಿಗೆ ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸಖಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಸಮಾಜ ಅಥವಾ ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ, ಸಮಾಲೋಚನೆಗಾಗಿ ಪ್ರತ್ಯೇಕವಾಗಿ ಅಲೆದಾಡಬೇಕಿತ್ತು. ಇದೀಗ ಪೊಲೀಸ್ ಠಾಣೆ, ಮಹಿಳಾ ಸಾಂತ್ವನ ಕೇಂದ್ರಗಳಿಗೆ ಹೋದ ದೂರುಗಳು ಸಖಿ ಕೇಂದ್ರಗಳಿಗೆ ಶಿಫಾರಸು ಮಜಾಡಲಾಗುತ್ತಿದೆ.

ಚುನಾವಣಾ ಕಾರ್ಡ್‌ಗೆ ʻಆಧಾರ್ ಲಿಂಕ್ʼ ಮಾಡದವರ ಹೆಸರನ್ನು ʻಮತದಾರರ ಪಟ್ಟಿʼಯಿಂದ ತೆಗೆದುಹಾಕುವುದಿಲ್ಲ: ಕೇಂದ್ರ ಸ್ಪಷ್ಟನೆ

2018 ರ ಮೇ ತಿಂಗಳಲ್ಲಿ ರಾಝ್ಯ ಸರ್ಕಾರ ಗೆಳತಿ ವಿಶೇಷ ಚಿಕಿತ್ಸಾ ಘಟಕ ಸ್ಥಾಪಿಸಿತ್ತು. ಇದನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ತರಲಾಗಿದ್ದು, ಸಖಿ ಒನ್ ಸ್ಟಾಪ್ ಸೆಂಟರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಖಿ ಒನ್ ಸ್ಟಾಪ್ ಸೆಂಟರ್ ಗೆ ದೂರು ಸಲ್ಲಿಸಬೇಕಾದವರು 1091 ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು.

Leave a Reply