ಮಾ.22 ರಂದು ಕರ್ನಾಟಕ ಬಂದ್‌ – vishwanews24

Featured, ರಾಜ್ಯ ನ್ಯೂಸ್

ಎಂಇಎಸ್‌ ಪುಂಡರಿಗೆ ಕಡಿವಾಣ ಹಾಕಲು ಬಂದ್‌ಗೆ ಕರೆ ಕೊಟ್ಟ ಕನ್ನಡಪರ ಸಂಘಟನೆಗಳು 

ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್‌ ಪುಂಡರಿಗೆ ಕಡಿವಾಣ ಹಾಕಲು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಾ.22 ಶನಿವಾರ ಕರ್ನಾಟಕ ಬಂದ್‌ಗೆ  ಕರೆ ನೀಡಿವೆ.

ಇಂದು ಬೆಂಗಳೂರಿನಲ್ಲಿ ವಿವಿಧ ಕನ್ನಡ ಸಂಘಟನೆಗಳ ಸಭೆ ಸೇರಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಮಾ.22 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡೆಯಲಿದೆ ವಾಟಾಳ್ ನಾಗರಾಜ್  ಹೇಳಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ : ಅದಾನಿ ಫೌಡೇಷನ್‌ ವತಿಯಿಂದ 50 ಲಕ್ಷ  ರೂ. ದೇಣಿಗೆ – vishwanews24

ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಮಾ.3 ರಂದು ಬೆಳಗ್ಗೆ 11 ಗಂಟೆಗೆ ರಾಜಭವನ ಮುತ್ತಿಗೆ ಹಾಕಲಿದ್ದೇವೆ. ಮಾ.7ಕ್ಕೆ ಬೆಳಗಾವಿ ಚಲೋ ಕೈಗೊಳ್ಳುತ್ತೇವೆ. ಮಾ.11 ರಂದು ಮೇಕೆದಾಟು ಯೋಜನೆಗೆ ಆಗ್ರಹಿಸಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಮಾ.14 ರಂದು ಮೈಸೂರು, ಮಂಡ್ಯ, ರಾಮನಗರ ಡಿಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸೇರಿದಂತೆ ಇಡೀ ಬೆಳಗಾವಿಯ ಎಲ್ಲಾ ಅಧಿಕಾರಿಗಳ ಬದಲಾವಣೆ ಆಗಬೇಕು. ಎಲ್ಲಾ ಕನ್ನಡ ಅಧಿಕಾರಿಗಳನ್ನ ಹಾಕಬೇಕು. ಎಂಇಎಸ್ ನಿಷೇಧ ಮಾಡಿ ಶಿವಸೇನೆ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಸಾಂಬಾಜಿ ಪ್ರತಿಮೆ ತೆರವು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕಾಪು  :ಮಾರಿಗುಡಿಯ ಬ್ರಹ್ಮಕಲಶೋತ್ಸವ – ಜೀರ್ಣೋದ್ಧಾರದಿಂದ ಧರ್ಮ ಉಳಿಯುತ್ತದೆ : ಸುಬ್ರಹ್ಮಣ್ಯ ಶ್ರೀ – vishwanews24

Leave a Reply