ಮಾನವೀಯತೆ ಮೆರೆದು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಕಾಪು ಪಿಎಸೈ ನಿತ್ಯಾನಂದ ಗೌಡ

Featured, ಉಡುಪಿ

ಮಾನವೀಯತೆ ಮೆರೆದು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಕಾಪು ಪಿಎಸೈ ನಿತ್ಯಾನಂದ ಗೌಡ

ಕಾಪು: ವಿದ್ಯಾಭ್ಯಾಸದ ನೆರವು ಕೋರಿ ಕಾಪು ಠಾಣೆಗೆ ಬಂದಿದ್ದ ವಿದ್ಯಾರ್ಥಿನಿಗೆ ಶಾಲಾ ಪರಿಕರಗಳು ‌ಮತ್ತು ಶಾಲಾ ಶುಲ್ಕ ಭರಿಸಿ ಕಾಪು‌ ಠಾಣಾಧಿಕಾರಿ ನಿತ್ಯಾನಂದ ಗೌಡ ಮಾನವೀಯತೆ ಮೆರೆದಿದ್ದಾರೆ.

ಮನೆಗೆ ಆಧಾರ ಸ್ತಂಭವಾಗಿದ್ದ ತಂದೆಯನ್ನ ಕಳೆದುಕೊಂಡು ಅತಂತ್ರವಾಗಿದ್ದ ಹೆಣ್ಣು ಮಗುವೊಬ್ಬಳು ಶಾಲಾ ಶುಲ್ಕ ಭರಿಸದೆ ವಿದ್ಯಾಭ್ಯಾಸ ತ್ಯಜಿಸುವ ಆಲೋಚನೆಯಲ್ಲಿದ್ದಾಗ ಪಿಎಸೈ ನೆರವು ನೀಡಿ ಆಸರೆಯಾಗಿದ್ದಾರೆ.

ನೆರವು ಪಡೆದಿರುವ ವಿಧ್ಯಾರ್ಥಿನಿ ಮೂಡುಬೆಳ್ಳೆಯ ನಳಿನಿಯ ಪುತ್ರಿ ತ್ರಿಶಾ ಆಗಿರುತ್ತಾರೆ.