ಮಾರುಕಟ್ಟೆಗೆ ಬಂದಿವೆ ‘ಮೋದಿ ಬಿಂದಿಗಳು’ – Vishwanews24

Featured, ರಾಷ್ಟ್ರ ನ್ಯೂಸ್

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಗಳಿರುವ ಸೀರೆಗಳ ನಂತರ ಇದೀಗ ‘ಮೋದಿ ಬಿಂದಿ’ಗಳು ಮಾರುಕಟ್ಟೆಗೆ ಬಂದಿವೆ.

ಪ್ರಧಾನಿ ನರೇಂದ್ರ ಮೋದಿ ಭಾವ ಚಿತ್ರಗಳಿರುವ ಸೀರೆಗಳ ನಂತರ ಇದೀಗ ‘ಮೋದಿ ಬಿಂದಿ’ಗಳು ಮಾರುಕಟ್ಟೆಗೆ ಬಂದಿವೆ. ‘ಪ್ಯಾರಾಸ್‌ ಫ್ಯಾನ್ಸಿ ಬಿಂದಿ’ ಎಂಬ ಕಂಪನಿಯೊಂದು ತನ್ನ ಉತ್ಪನ್ನಗಳ ಮೇಲೆ ಹೊಸ ಟ್ಯಾಗ್‌ಲೈನ್‌ ಒಂದನ್ನು ಸೇರಿಸಿದೆ. ಮಾತ್ರವಲ್ಲ, ಈ ಬಿಂದಿ ಪ್ಯಾಕೆಟ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮತ್ತು ಬಿಜೆಪಿ ಲೋಗೋ ಬಳಕೆ ಮಾಡಲಾಗಿದೆ.

ಮತ್ತೊಮ್ಮೆ ಮೋದಿ ಸರಕಾರ ಎಂಬ ಸಾಲಿನ ಜತೆಗೆ ಮಹಿಳೆಯರ ಹಣೆಬೊಟ್ಟಿನ ಪ್ಯಾಕೇಟ್‌ ಮೇಲೆ ಮೋದಿ ಭಾವಚಿತ್ರ ಆವರಿಸಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಮಾತ್ರವಲ್ಲ, ‘ಮೋದಿ ಬಿಂದಿ’ ಸಾಮಾಜಿಕ ತಾಣಗಳಲ್ಲಿ ವಾದ ವಿವಾದಕ್ಕೂ ಕಾರಣವಾಗಿದೆ.