ಮಾರ್ಚ್ 6 ರಿಂದ ಮೊದಲ್ಗೊಂಡು ಮಾರ್ಚ್ 8 , ತಿಂಗಳೆ 59 ನೇ ಸಾಹಿತ್ಯೋತ್ಸವ ಮತ್ತು ಧರ್ಮದೈವಗಳ ನೇಮೋತ್ಸವ

Featured, ರಾಜ್ಯ ನ್ಯೂಸ್

ತಿಂಗಳೆ 59 ನೇ ಸಾಹಿತ್ಯೋತ್ಸವ ಮತ್ತು ಧರ್ಮದೈವಗಳ ನೇಮೋತ್ಸವ

ಹೆಬ್ರಿ: ಹೆಬ್ರಿ ತಾಲೂಕಿನ ತಿಂಗಳೆ ಗರಡಿಯಲ್ಲಿ ದಿನಾಂಕ ಮಾರ್ಚ್ 6 ರಿಂದ ಮೊದಲ್ಗೊಂಡು ಮಾರ್ಚ್ 8 ರ ವರೆಗೆ ಧರ್ಮ ದೈವಗಳ ನೇಮೋತ್ಸವ ಮತ್ತು 59 ನೇ ಸಾಹಿತ್ಯೋತ್ಸವ ನಡೆಯಲಿದೆ.

ದಿನಾಂಕ ಮಾರ್ಚ್ 6 ರಂದು ರಾತ್ರಿ ಎಂಟಕ್ಕೆ ಕೊಡಮಣಿತ್ತಾಯ ನೇಮ ,ಮಾರ್ಚ್ 7 ರಂದು ರಾತ್ರಿ ಏಳಕ್ಕೆ ಒಡ್ಡಮರಾಯ ದೈವದ ನೇಮ ,ದಿನಾಂಕ ಮಾರ್ಚ್ 8 ರಂದು ರಾತ್ರಿ 9 ಗಂಟೆಗೆ ಶಿವರಾಯ ಮತ್ತು ಬ್ರಹ್ಮ ಬೈದರ್ಕಳ ನೇಮ ನಡೆಯಲಿದೆ.
ಅದೇ ದಿನ ಸಂಜೆ 6.30 ಕ್ಕೆ ಸರಿಯಾಗಿ ಅಂಬಾತನಯ ಮುದ್ರಾಡಿಯವರ ಅಧ್ಯಕ್ಷತೆಯಲ್ಲಿ 59 ನೇ ತಿಂಗಳೆ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ರಂಗಕರ್ಮಿ,ಕವಿ,ಸಾಹಿತಿ, ಸಂಗೀತ ನಿರ್ದೇಶಕ ಕೊಳಲು ವಾದಕ ಹಾಗೂ ಚಿಂತಕ ಗುರುರಾಜ ಮಾರ್ಪಳ್ಳಿ ಇವರಿಗೆ ತಿಂಗಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

“ನಾವೆತ್ತ ಸಾಗುತ್ತಿದ್ದೇವೆ” ಎಂಬ ವಿಚಾರದ ಬಗ್ಗೆ ವೀಣಾ ಬನ್ನಂಜೆ,ಚಕ್ರವರ್ತಿ ಸೂಲಿಬೆಲೆ, ಹಾಗೂ ರೋಹಿತ್ ಚಕ್ರತೀರ್ಥ ಇವರರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Vishwanews24