ಮಿಸೆಸ್​ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ – Vishwanews24

Featured, ರಾಷ್ಟ್ರ ನ್ಯೂಸ್

ಮಿಸೆಸ್​ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಪ್ಡೇಟ್‍ಗಳ ಬಗ್ಗೆ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುವ ಮುದ್ದು ಬೊಂಬೆ ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಆಗಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಅವರು ಮಾಡುತ್ತಿದ್ದ ತಯಾರಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ನಿವೇದಿತಾ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ.

Niveditha Gowda Wiki, Age, Boyfriend, Husband, Family, Biography & More -  WikiBio

ಮಿಸೆಸ್ ಇಂಡಿಯಾ ಆಗಿರುವ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ ನಿವೇದಿತಾ ತಂಡ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ, ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ನಮ್ರತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

niveditha gowda long hair, ಮದುವೆ ಬಳಿಕ ಬದಲಾದ್ರಾ ನಿವೇದಿತಾ ಗೌಡ? ಅನುಮಾನ ಮೂಡಿಸಿದ  ಆ ಒಂದು ವಿಡಿಯೋ! - chandan shetty and niveditha gowda fans rise questions  about long hair - Vijaya Karnataka

ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಅವರು ಹೋಮ್ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವೀಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್ ಏನು ಎಂಬ ಬಗ್ಗೆ ಹೇಳಿದ್ದರು.

https://www.instagram.com/p/CgRS5kDP5QW/?utm_source=ig_embed&ig_rid=85525f95-16ba-42b4-a3a7-3ba6b9b7cf84

ಅಲ್ಲದೇ, ಈ ವೀಡಿಯೋದಲ್ಲಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ. ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ತೋರಿಸಿದ್ದಾರೆ. ಫೇಸ್ ಮಸಾಜ್‍ಗಳನ್ನು ಹೇಳಿಕೊಟ್ಟಿದ್ದು, ಯಾವುದರಿಂದ ಏನು ಲಾಭ ಎಂಬುದನ್ನ ಸಹ ತಿಳಿಸಿದ್ದರು.

Leave a Reply