ಮುಂಗಾರಿನ ಅಬ್ಬರಕ್ಕೆ ಮಹಾರಾಷ್ಟ್ರ ತತ್ತರ , ಜನಜೀವನ ಅಸ್ತವ್ಯಸ್ಥ – Vishwanews24
ಮುಂಗಾರಿನ ಅಬ್ಬರಕ್ಕೆ ಮುಂಬೈ ಮಹಾರಾಷ್ಟ್ರ ತತ್ತರ – Vishwanews24
ಮುಂಬೈ, : ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಭಾರೀ ಮಳೆಯಾಗುತ್ತಿದೆ. ಭಾರತೀಯ ಹವಮಾನ ಇಲಾಖೆ ಶುಕ್ರವಾರದ ತನಕ ಭಾರೀ ಮಳೆ ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರದ ಮುಂಬೈ ಮತ್ತು ಥಾಣೆ ನಗರಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬುಧವಾರ ಬೆಳಗ್ಗೆ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ನಗರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
#WATCH | Heavy rainfall lashes Mumbai this morning, visuals from Bandra. pic.twitter.com/tSo7sIIBhc
— ANI (@ANI) July 6, 2022
ಮಾನ್ಸೂನ್ ಮಳೆ ಪರಿಣಾಮ: ಭಾರತದಲ್ಲಿ ಉದ್ಯೋಗ ದರ ಕುಸಿತ ಬಾಂದ್ರಾ ಪ್ರದೇಶದ ವಿಡಿಯೋವೊಂದನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದಕ್ಕೆ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಆರಿದ್ರಾ ಮಳೆ ಅಬ್ಬರಕ್ಕೆ ಕೊಡಗು ತಲ್ಲಣ, ಭೂಕುಸಿತದ ಆತಂಕ ಸೋಮವಾರದಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಮಳೆ ಜೋರಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಜ್ಜಾಗಿರಬೇಕು ಎಂದು ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ ಮಂಗಳವಾರ ಬೆಳಗ್ಗೆ 8.30ರ ವರದಿಯಂತೆ ಮುಂಬೈ ನಗರದಲ್ಲಿ 24 ಗಂಟೆಯಲ್ಲಿ 95.81 ಮಿ. ಮೀ. ಮಳೆಯಾಗಿತ್ತು. ಮಳೆಯಿಂದಾಗಿ ಮುಂಬೈ ನಗರದ ಜೀವನಾಡಿ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಮುಂಬೈ ನಗರದ ಮಳೆ ವಿಡಿಯೋ ಥಾಣೆಯಲ್ಲಿಯೂ ಸಹ ಸೋಮವಾರದಿಂದ ಮಳೆಯಾಗುತ್ತಲೇ ಇದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಮುಂಬೈ ಮತ್ತು ಥಾಣೆ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
