ಮುಂದಿನ ಚುನಾವಣೆಯಲ್ಲಿ ನಮ್ಮ ದಾರಿ ನಮಗೆ, ಜೆಡಿಎಸ್ ದಾರಿ ಅವರಿಗೆ ಬಿಟ್ಟದ್ದು : ಮುನಿಯಪ್ಪ -Vishwanews24
ಕೋಲಾರ : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ, ನಮ್ಮ ದಾರಿ ನಮಗೆ, ಜೆಡಿಎಸ್ ದಾರಿ ಅವರಿಗೆ ಬಿಟ್ಟಿದ್ದು ಎಂದು ಮಾಜಿ ಸಂಸದ ಮುನಿಯಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಜೆಡಿಎಸ್ ಗೆ ಬೆಂಬಲ ಮಾಡಿಲ್ಲ. ನಮ್ಮ ಪರ ಜೆಡಿಎಸ್ ಕೆಲಸ ಮಾಡಿಲ್ಲ. ಎರಡೂ ಕಡೆಯ ನಾಯಕರು ಪೂರ್ತಿ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಎಂದೂ ಊಹಿಸದ ರೀತಿ ಸೋಲು ಕಂಡಿವೆ ಎಂದು ಹೇಳಿದರು.
ತ್ರಿಕೋನ ಸ್ಪರ್ಧೆ ಇದ್ದರೆ ಬಿಜೆಪಿ ಮೂರನೇ ಸ್ಥಾನಕ್ಕೆ ಇಳಿಯುತ್ತದೆ. ಮತದಾರರು ಒಂದಾಗದ ಕಾರಣ ಮುಂದಿನ ಚುನಾವಣೆಯಲ್ಲಿ ಮೈತ್ರಿ ಇಲ್ಲ. ಸದ್ಯ ಮೈತ್ರಿ ಸರ್ಕಾರಕ್ಕೆ ಯಾವುದೆ ಸಮಸ್ಯೆಯಿಲ್ಲ.
ಸರ್ಕಾರ 5 ವರ್ಷ ಸುಭದ್ರ ಎಂದು ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
